ಬೆಂಗಳೂರು : ಬಿರು ಬೇಸಿಗೆಯ ತೀವ್ರತೆ ನಡುವೆ ‘ಗಾರ್ಡನ್ ಸಿಟಿ’ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು ಇದೀಗ ಉಷ್ಣತೆಯ ತೀವ್ರ ಹೊಡೆತಕ್ಕೆ ಸಿಲುಕಿದೆ. ಐದಾರು ದಶಕಗಳ ಬಳಿಕ ನಗರದಲ್ಲಿ 40°C ತಾಪಮಾನ ದಾಖಲಾಗಿದ್ದು, ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ಜಿಬಿಎ (ಗ್ರೇಟರ್ ಬೆಂಗಳೂರು ಆಡಳಿತ) ನಡೆಸಿದ ಸಮೀಕ್ಷೆಯ ಪ್ರಕಾರ, ನಗರದಲ್ಲಿ ಸರಾಸರಿ ತಾಪಮಾನ 37°C ಇದ್ದರೂ, ಸುಮಾರು 40% ವಾರ್ಡ್‌ಗಳಲ್ಲಿ 40°C ದಾಟಿದ ಬಿಸಿಲು ಕಂಡುಬಂದಿದೆ. ಬಿಸಿ ಗಾಳಿಯ ತೀವ್ರತೆ ಹೆಚ್ಚಿದ ಪರಿಣಾಮ ಜನಜೀವನದ ಮೇಲೆ ಪರಿಣಾಮ ಉಂಟಾಗಿದೆ.
ರಾಜ್ಯದಲ್ಲಿ ತಾಪಮಾನ ಏರಿಕೆ ಗಂಭೀರ ಹಂತ ತಲುಪಿರುವ ಹಿನ್ನೆಲೆಯಲ್ಲಿ, ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳ ಆರೋಗ್ಯ ಇಲಾಖೆಗಳು ತುರ್ತು ಸಿದ್ಧತೆ ಕೈಗೊಂಡಿವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ಮ್ಯಾನೇಜ್ಮೆಂಟ್ ರೂಮ್‌ಗಳು ಕಡ್ಡಾಯಗೊಳಿಸಲಾಗಿದೆ. ಈ ವ್ಯವಸ್ಥೆಗಳನ್ನು ಮೇ 31, 2026ರವರೆಗೆ ಸಕ್ರಿಯವಾಗಿಡಲು ಸೂಚನೆ ನೀಡಲಾಗಿದ್ದು, ತುರ್ತು ಚಿಕಿತ್ಸೆಗೆ ವಿಶೇಷ ಸಿದ್ಧತೆ ನಡೆಸಿದೆ.
ಹಾಟ್‌ಸ್ಪಾಟ್‌ಗಳ ಪಟ್ಟಿ – ಯಾವ ವಾರ್ಡ್‌ನಲ್ಲಿ ಎಷ್ಟು ತಾಪಮಾನ?
ಕೇಂದ್ರ ನಗರಪಾಲಿಕೆ
- 63 ವಾರ್ಡ್‌ಗಳಲ್ಲಿ 47 ವಾರ್ಡ್‌ಗಳು ಹಾಟ್‌ಸ್ಪಾಟ್
- ವಾರ್ಡ್ 34 (ಗುಂಡಪ್ಪ): 40.3°C
- ಪೂರ್ವ ನಗರಪಾಲಿಕೆ
- ವಾರ್ಡ್ 28 (ನೀಲಸಂದ್ರ): 39.7°C
- ವಾರ್ಡ್ 27 (ವಿಭೂತಿಪುರ): 41.3°C
ಉತ್ತರ ನಗರಪಾಲಿಕೆ
- ವಾರ್ಡ್ 6 (ಕಲ್ಕೆರೆ): 40.8°C
- ವಾರ್ಡ್ 25 (ಗೋವಿಂದಾಪುರ): 49.4°C (ಅತಿಹೆಚ್ಚು!)
- ವಾರ್ಡ್ 19: 40.3°C
ದಕ್ಷಿಣ ನಗರಪಾಲಿಕೆ
- ವಾರ್ಡ್ 34: 40.7°C
- ವಾರ್ಡ್ 52 (ತಲಘಟ್ಟಪುರ): 39.9°C
- ಪಶ್ಚಿಮ ನಗರಪಾಲಿಕೆ
- ವಾರ್ಡ್ 12 (ಅಂದ್ರಹಳ್ಳಿ): 41.2°C
- ವಾರ್ಡ್ 6 (ಶಿವಾಪುರ): 40.9°C.
ನಾಗವಾರ – ಪೀಣ್ಯ ಪ್ರದೇಶಗಳಲ್ಲಿ ಹೆಚ್ಚಿದ ತಾಪಮಾನ:
ನಗರದ ಕೈಗಾರಿಕಾ ವಲಯಗಳಾದ ನಾಗವಾರ ಮತ್ತು ಪೀಣ್ಯ ಪ್ರದೇಶಗಳಲ್ಲಿ ಉಷ್ಣತೆ ಹೆಚ್ಚಾಗಿ ದಾಖಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಹವಾಮಾನ ಇಲಾಖೆ ಎಚ್ಚರಿಕೆಯ ಪ್ರಕಾರ, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.
ಬೆಂಗಳೂರಲ್ಲಿ ಈ ಪರಿ ಬಿಸಿಲು ಏರಿಕೆಗೆ ಏನು ಕಾರಣ?
- ನಗರದಲ್ಲಿ ಹಸಿರು ಹೊದಿಕೆ ಇಳಿಕೆ
- ಅತಿಯಾದ ನಗರೀಕರಣ
- ವಾಹನ ಸಂಖ್ಯೆಗಳ ಹೆಚ್ಚಳ, ವಾಯು ಮಾಲಿನ್ಯ
- ಕಳೆದ ಕೆಲ ವರ್ಷದಲ್ಲಿ ಮಳೆ ಕಡಿಮೆ
- ಕೈಗಾರಿಕಾ ಪ್ರದೇಶಗಳು ಹೆಚ್ಚಳ.
ಇದನ್ನೂ ಓದಿ : ಈಶಾನ್ಯ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮನ್ವಂತರ : 6 ಒಳಾಂಗಣ ಕ್ರಿಕೆಟ್ ಅಕಾಡೆಮಿಗಳಿಗೆ ಪ್ರಧಾನಿ ಮೋದಿ ಚಾಲನೆ



















