ಬೆಂಗಳೂರು : SSLC ರಿಸಲ್ಟ್‌ನಲ್ಲಿ ಕಲಬುರಗಿಗೆ ಕೊನೆಯ ಸ್ಥಾನ ಪಡೆದ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ ʻದೋಸ್ತಿʼ ಪಕ್ಷದ ವಿರುದ್ಧ ಬೆಂಕಿ ಕಾರಿದ್ದಾರೆ.
ಜೆಡಿಎಸ್-ಬಿಜೆಪಿ ಅವರು ಬೌತಿಕವಾಗಿ ದಿವಾಳಿಯಾಗಿದ್ದಾರೆ. ವೈಯಕ್ತಿಕವಾಗಿ ನನ್ನ ಬಗ್ಗೆ, ತಂದೆ ಬಗ್ಗೆ, ಹೆಂಡತಿ ಬಗ್ಗೆ ಮಾತಾಡ್ತಾರೆ. ವಿಶೇಷ ಸದನ ಕರೆದ್ರೆ ಓಡಿ ಹೋಗ್ತಾರೆ, ವಾಕ್ ಔಟ್ ಮಾಡ್ತಾರೆ, ಅವ್ರ ಬಳಿ ಇಶ್ಯೂ ಇಲ್ಲ.. ಅದಕ್ಕೆ ಹೀಗೆ ಮಾತ್ನಾಡ್ತಾರೆ ಅಂತಾ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಬಹಳ ವರ್ಷಗಳ ನಂತರ ಇಂತಹ ಹೀಟ್ ವೇವ್ ನೋಡುತ್ತಿದ್ದೇವೆ, ಡಿಜಾಸ್ಟರ್ ಮ್ಯಾನೇಜ್‌ಮೆಂಟ್ ಜೊತೆ ಸಿಎಂ ಸಭೆ ನಡೆಸಿದ್ದು, ಆರೋಗ್ಯ ಇಲಾಖೆಯಿಂದ ಎಸ್‌ಒಪಿ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಬೋರ್‌ವೆಲ್ ಹಾಗೂ ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಮುಂದಿನ ಎರಡು ತಿಂಗಳು ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದು, ಹೀಟ್ ವೇವ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದರು. ಹವಾಮಾನದ ಏರುಪೇರಿನಿಂದ ಅನಾನುಕೂಲ ಉಂಟಾಗುತ್ತಿದ್ದು, ಹಣದ ಕೊರತೆ ಇಲ್ಲದಿದ್ದರೂ ಬೋರ್‌ವೆಲ್ ಕೊರೆದರೂ ನೀರು ಸಿಗಬೇಕೆಂಬುದು ಪ್ರಕೃತಿ ನಿಯಮ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯಲು ಮುಂದಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದ್ದು, ಶಾಸಕರು ಅದಕ್ಕೆ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ : ಗಣತಿ ಕಾರ್ಯಕ್ಕೆ ಸಿಬ್ಬಂದಿ ಕೊರತೆ : ಇಲಾಖೆಗಳಿಗೆ ಪಾಲಿಕೆ ಆಯುಕ್ತರಿಂದ ಕಠಿಣ ಎಚ್ಚರಿಕೆ!



















