ಬೆಂಗಳೂರು : ಜಾಗತಿಕ ಎಲೆಕ್ಟ್ರಿಕ್ ವಾಹನ (EV) ದೈತ್ಯ ಟೆಸ್ಲಾ ಇದೀಗ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಎರಡನೇ ಕಾರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ‘ಟೆಸ್ಲಾ ಮಾಡೆಲ್ Y L’ (Tesla Model Y L) ಎಲೆಕ್ಟ್ರಿಕ್ ಎಸ್‌ಯುವಿ ಕಾರು ಇದೀಗ ಭಾರತದಲ್ಲಿ ಖರೀದಿಗೆ ಲಭ್ಯವಿದ್ದು, ಇದರ ಎಕ್ಸ್ ಶೋರೂಂ ಬೆಲೆಯನ್ನು 61.99 ಲಕ್ಷ ರೂ. ನಿಗದಿಪಡಿಸಲಾಗಿದೆ.
ಮುಂಬೈನಲ್ಲಿ ನಡೆಯಲಿರುವ ಅಧಿಕೃತ ಲಾಂಚ್ ಈವೆಂಟ್‌ಗೂ ಮುನ್ನವೇ ಟೆಸ್ಲಾ ಇಂಡಿಯಾ ವೆಬ್‌ಸೈಟ್‌ನಲ್ಲಿ ಇದರ ಬೆಲೆ ಪಟ್ಟಿ ಲೈವ್ ಆಗಿದೆ. ಇದು 6 ಆಸನಗಳ (ಸೀಟರ್) ವಿನ್ಯಾಸವನ್ನು ಹೊಂದಿದ್ದು, ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಟೆಸ್ಲಾದ ಅತ್ಯಂತ ‘ವ್ಯಾಲ್ಯೂ ಫಾರ್ ಮನಿ’ (Value for Money) ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದಲ್ಲಿ ಮಾಡೆಲ್ Y L ನ ಸ್ಥಾನ ಮತ್ತು ಬೆಲೆ
ಭಾರತೀಯ ಮಾರುಕಟ್ಟೆಯಲ್ಲಿ ಟೆಸ್ಲಾ ಮಾಡೆಲ್ Y L, ಮಾಡೆಲ್ Y ಪ್ರೀಮಿಯಂ ಆರ್‌ಡಬ್ಲ್ಯೂಡಿ ( 59.89 ಲಕ್ಷ ರೂ) ಮತ್ತು ಮಾಡೆಲ್ Y ಪ್ರೀಮಿಯಂ ಲಾಂಗ್ ರೇಂಜ್ ಆರ್‌ಡಬ್ಲ್ಯೂಡಿ 67.89 ಲಕ್ಷ ರೂ) ನಡುವೆ ಸ್ಥಾನ ಪಡೆದುಕೊಂಡಿದೆ. ವಾಹನ ಮಾರುಕಟ್ಟೆ ತಜ್ಞರು ಈ ಕಾರಿನ ಬೆಲೆ 70 ಲಕ್ಷ ರೂ. ಆಸುಪಾಸಿನಲ್ಲಿರಬಹುದು ಎಂದು ಅಂದಾಜಿಸಿದ್ದರು. ಆದರೆ, ಆಲ್-ವೀಲ್ ಡ್ರೈವ್ (AWD) ತಂತ್ರಜ್ಞಾನವನ್ನು ಹೊಂದಿದ್ದರೂ 61.99 ಲಕ್ಷ ರೂ.ಗಳ ಆಕರ್ಷಕ ಬೆಲೆಯಲ್ಲಿ ಪರಿಚಯಿಸುವ ಮೂಲಕ ಟೆಸ್ಲಾ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಈ ಕಾರುಗಳನ್ನು ಚೀನಾದಿಂದ ನೇರವಾಗಿ ಆಮದುಗಳಾಗಿ ಭಾರತಕ್ಕೆ ತರಲಾಗುತ್ತಿದೆ.
ವಿಶಾಲವಾದ ಇಂಟೀರಿಯರ್
ಮಾಡೆಲ್ Y L ಎಂಬುದು ಈ ಎಲೆಕ್ಟ್ರಿಕ್ ವಾಹನದ ‘ಲಾಂಗ್-ವೀಲ್ ಬೇಸ್’ ಆವೃತ್ತಿಯಾಗಿದೆ. ಅಮೆರಿಕದಲ್ಲಿ ಇನ್ನೂ ಬಿಡುಗಡೆಯಾಗದ ಈ ಮಾದರಿ ಚೀನಾದಲ್ಲಿ ಈಗಾಗಲೇ ಯಶಸ್ವಿಯಾಗಿ ಮಾರಾಟವಾಗುತ್ತಿದೆ. ಈ ವಾಹನದ ಅತಿ ದೊಡ್ಡ ಆಕರ್ಷಣೆ ಎಂದರೆ ಇದರ 2+2+2 ಆಸನ ವಿನ್ಯಾಸ.
ಇದನ್ನೂ ಓದಿ : ನಬಾರ್ಡ್ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆಯಲ್ಲಿ ನೇಮಕಾತಿ : 60 ಸಾವಿರ ರೂ. ಸಂಬಳ



















