ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ಮಹಿಳಾ ಕಾಲೇಜುಗಳಲ್ಲಿ ಒಂದಾದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜಿನಲ್ಲಿ ಇದೇ ಏ.18ರಂದು ಪದವಿಯ 2021-2024ನೇ ಸಾಲಿನ ಮತ್ತು ಸ್ನಾತಕೋತ್ತರ ಪದವಿಯ 2022-2024ನೇ ಸಾಲಿನ 6ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ರಮೇಶ್ ಬಿ. ಅವರು ಪಾಲ್ಗೊಳ್ಳಲಿದ್ದು, ಗೌರವ ಅತಿಥಿಗಳಾಗಿ ಭಾರತೀಯ ಆಣಿಕ ಪರಿಸರ ವಿಜ್ಞಾನ ಮತ್ತು ಪ್ರೊಫೆಸರ್ ಎನ್.ಸಿ.ಬಿ.ಎಸ್. ನ ಪ್ರೊ.ಉಮಾ ರಾಮಕೃಷ್ಣನ್ ಉಪಸ್ಥಿತರಿರಲಿದ್ದಾರೆ. ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಟ್ರಸ್ಟ್‌ನ ಅಧ್ಯಕ್ಷ ಎಸ್.ಎಸ್.ನಾಗಾನಂದ್ ವಹಿಸಲಿದ್ದಾರೆ.
ಈ ಸಂಧರ್ಭದಲ್ಲಿ ರಿಜಿಸ್ಟ್ರಾರ್ ಡಾ. ರಮೇಶ್ ಕುಂದೇನಹಟ್ಟಿ, ಆಡಳಿತಾಧಿಕಾರಿ ನವೀನ್ ಜೋಸೆಫ್ ಎ.(ಕೆ.ಎ.ಎಸ್) ಮತ್ತು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಕ.ಜೈರಾಜ್, ಪ್ರಾಂಶುಪಾಲ ಡಾ.ನಂದಾ ಕುಲಕರ್ಣಿ, ಪರೀಕ್ಷಾಂಗ ಸಂಯೋಜಕ ಡಾ. ಕಮಲ ಎ ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಈ ಘಟಿಕೋತ್ಸವ ಕಾರ್ಯಕ್ರದಲ್ಲಿ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಗುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಬಿಸಿಲಿನ ತಾಪಮಾನಕ್ಕೆ ಬೇಸತ್ತ ಬೀದರ್ ಜನತೆ – ಏ.29 ರಿಂದ ಮೇ.12 ರವರೆಗೆ ಹೈ ಅಲರ್ಟ್ ಘೋಷಣೆ



















