ಬೀದರ್ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಗ್ಯಾರೇಜ್‌ನಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ 7 ಬೈಕ್‌ಗಳು ಸುಟ್ಟು ಕರಕಲಾಗಿರುವ ಘಟನೆ ಬೀದರ ಜಿಲ್ಲೆ ಮುತ್ತಂಗಿ ಗ್ರಾಮದಲ್ಲಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ.
ಶಾಹಬುದ್ದೀನ್ ಶಾ ನಿರ್ಣಾ ಅವರಿಗೆ ಸೇರಿದ ಗ್ಯಾರೇಜ್ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ವ್ಯಾಪಿಸಿದೆ. ಈ ಅಂಗಡಿ ರಾಚಣ್ಣ ಮಾಲಿ ಪಾಟೀಲ್ ಅವರಿಗೆ ಸೇರಿದ್ದು, ಬಾಡಿಗೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದನು, ನಿನ್ನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂಗಡಿಯಲ್ಲಿ ಇದ್ದ ಒಟ್ಟು 7 ಬೈಕ್‌ಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೆಂಕಿ ತೀವ್ರತೆಯಿಂದಾಗಿ ಅಂಗಡಿಗೆ ಸುಮಾರು ಐದರಿಂದ ಆರು ಲಕ್ಷ ಹಾನಿಯಾಗಿದೆ ಎಂದು ಗ್ಯಾರೇಜ್ ಮಾಲಿಕ ಶಾಹಬುದ್ದೀನ್ ತಿಳಿಸಿದ್ದಾರೆ.
ಇದನ್ನೂ ಓದಿ: ಕೋದಂಡರಾಮಸ್ವಾಮಿಯ ಬ್ರಹ್ಮರಥೋತ್ಸವ : ಏ.12 ರಿಂದ 15ರವರೆಗೆ ಬೆಂಗಳೂರಿನ ಈ ಸಂಚಾರ ಮಾರ್ಗದಲ್ಲಿ ಬದಲಾವಣೆ



















