ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಬಯಸುತ್ತಿರುವವರಿಗೆ ಸಿಹಿ ಸುದ್ದಿ ದೊರೆತಿದೆ. ದೇಶದ ಅತ್ಯಂತ ಹಳೆಯ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾಗಿರುವ ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಲವು ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಕಾಸ್ಮೋಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್
ಒಟ್ಟು ಹುದ್ದೆಗಳು: ವಿವಿಧ
ಹುದ್ದೆಗಳ ಹೆಸರು: ಮ್ಯಾನೇಜರ್
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ದೇಶದ ಹಲವೆಡೆ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಏಪ್ರಿಲ್ 14
ಕರ್ನಾಟಕ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಸೇರಿ ದೇಶದ ಹಲವೆಡೆ ಇರುವ ಬ್ರ್ಯಾಂಚ್ ಗಳಲ್ಲಿ ನೇಮಕಾತಿ ನಡೆಯುತ್ತಿದೆ. ಅರ್ಜಿಗಳನ್ನು ಸಲ್ಲಿಸುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಲ್ಲಿ ಸಿಎ, ಸಿಎಂಎ, ಎಲ್ ಎಲ್ ಬಿ ಹಾಗೂ ಪದವಿ ಪಡೆದಿರಬೇಕು ಎಂದು ತಿಳಿಸಲಾಗಿದೆ. ಗರಿಷ್ಠ 50 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ cosmos.bank.in ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಗಳ ಅಧಿಸೂಚನೆಯನ್ನು ಓದಿ ಅರ್ಹತೆ ಪರಿಶೀಲಿಸಬೇಕು.
ಆನ್ ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆದು, ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು
ಫ್ಯೂಚರ್ ರೆಫರೆನ್ಸಿಗಾಗಿ ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಬೇಕು
ಇದನ್ನೂ ಓದಿ; ಪರಮಾಣು ವಿದ್ಯುತ್ ನಿಗಮದಲ್ಲಿ 330 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ – 74 ಸಾವಿರ ರೂ. ಸಂಬಳ



















