ಬಾಗಲಕೋಟೆ : ಬಾಗಲಕೋಟೆ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ತಮ್ಮ ತಂದೆಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದಿದ್ದಾರೆ.
ಎಚ್. ವೈ. ಮೇಟಿ ಅವರ ಪುತ್ರರಾದ ಉಮೇಶ್ ಮೇಟಿ, ಮತದಾನಕ್ಕೂ ಮುನ್ನ ತಿಮ್ಮಾಪುರ ಗ್ರಾಮದ ಜಮೀನಿನಲ್ಲಿ ಇರುವ ತಂದೆಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮತಗಟ್ಟೆಗೆ ಆಗಮಿಸಿದ ಅವರು ತಮ್ಮ ಮತ ಚಲಾಯಿಸಿದ್ದಾರೆ.
ಈ ವೇಳೆ ಅಭಿಮಾನಿಯೊಬ್ಬರು ಉಮೇಶ್ ಮೇಟಿ ಬಳಿ ಟಗರು ಕರೆತಂದು, ಅದಕ್ಕೆ ಕಾಂಗ್ರೆಸ್ ಪಕ್ಷದ ಶಾಲು ಕಟ್ಟಿದ್ದ ದೃಶ್ಯ ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ : ‘ನಿಮ್ಮ ಮತವೇ ಕ್ಷೇತ್ರದ ಭವಿಷ್ಯ’.. ಬೈಎಲೆಕ್ಷನ್ ಹಿನ್ನೆಲೆ ಮತದಾರರಿಗೆ ಡಿಸಿಎಂ ಮನವಿ


















