ಬಳ್ಳಾರಿ : ರೈಲಿನಲ್ಲಿ ಸಾಗಾಟ ಮಾಡ್ತಿದ್ದ ಬರೋಬ್ಬರಿ 20.24 ಲಕ್ಷ ಮೌಲ್ಯದ 40.49ಕೆಜಿ ಗಾಂಜಾವನ್ನು ಬಳ್ಳಾರಿ ರೈಲ್ವೇ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ವಾಸ್ಕೋಡಗಾಮಾ ಶಾಲಿಮರ್ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಶ್ವಾನದಳದ ಮೂಲಕ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದ ರೈಲ್ವೇ ಪೊಲೀಸರು, ಗಾಂಜಾ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ರೈಲಿನ ಜನರಲ್ ಬೋಗಿಯ ಸೀಟ್ ಕೆಳಗಡೆ ಪ್ಯಾಕ್ ಮಾಡಿ ಗಾಂಜಾ ಇಟ್ಟಿದ್ದರು ಎನ್ನಲಾಗಿದೆ. ಸದ್ಯ 19 ಬಂಡಲ್ ನಲ್ಲಿದ್ದ 20.24 ಲಕ್ಷ ಮೌಲ್ಯದ 40.49 ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಯುದ್ಧ ನಿಲ್ತಿದ್ದಂತೆ ಚಿನ್ನದ ಬೆಲೆ ಭಾರೀ ಏರಿಕೆ!



















