ಬೆಂಗಳೂರು : ಬೆಂಗಳೂರು ಮಲ್ಲೇಶ್ವರದ ಸ್ಯಾಂಕಿ ಕೆರೆ ಆವರಣದಲ್ಲಿ ಸ್ವಯಂ ಶಕ್ತಿಯಿಂದ ಕಾರ್ಯನಿರ್ವಹಿಸುವ ಓಪನ್ ಏರ್ ಫಿಟ್ನೆಸ್ ಜಿಮ್‌ಗೆ ಚಾಲನೆ ನೀಡಲಾಯಿತು. ಮಾಜಿ ಡಿಸಿಎಂ ಮತ್ತು ಮಲ್ಲೇಶ್ವರದ ಜನಪ್ರಿಯ ಶಾಸಕರಗಿರುವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹಾಗೂ ಅಂತರರಾಷ್ಟ್ರೀಯ ಈಜು ಕ್ರೀಡಾಪಟು ಶ್ರೀ ಹರಿ ನಟರಾಜನ್ ನ್ಯೂ ಜಿಮ್ ಉದ್ಘಾಟಿಸಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ.ಸಿ.ಎನ್ ಅಶ್ವಥ್ ನಾರಾಯಣ್, ಇದು ತುಂಬಾ ವೈಜ್ಞಾನಿಕವಾದಂತಹ ಜಿಮ್ ಆಗಿದೆ. ಹಾಗೆ ಬಯೋ ಮೆಕಾನಿಕಲ್ ಆಗಿರುವಂಥದ್ದು. ನಮ್ಮ ದೇಹವನ್ನು ದಂಡಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಇದಕ್ಕೆಲ್ಲ ಸಹಾಯಕವಾಗುವಂತೆ ಕುಚಿ ಕಂಪನಿ ಅತ್ಯಾಧುನಿಕ ಅಡ್ವಾನ್ಸ್ ತಂತ್ರಜ್ಞಾನವುಳ್ಳ ಉಪಕರಣಗಳನ್ನು ನೀಡಿದೆ.

ನಗರದಲ್ಲಿ ಇರುವಂತಹ ಎಲ್ಲ ನಮ್ಮ ಸಾರ್ವಜನಿಕರಿಗೆ ಅರೋಗ್ಯ ರಕ್ಷಣೆ ಮತ್ತು ಆರೋಗ್ಯ ಮಟ್ಟವನ್ನ ಹೆಚ್ಚಿಸಿಕೊಳ್ಳಲು ಈ ಜಿಮ್ ಸಹಾಯವಾಗುತ್ತೆ ಎಂದರು.ಇನ್ನೂ ಜಿಮ್ ಪ್ರಾರಂಭವಾಗಿರುವ ಬಗ್ಗೆ ಪ್ರತಿನಿತ್ಯ ಸ್ಯಾಂಕಿ ಕೆರೆಯ ಬಳಿ ವ್ಯಾಯಾಮ ಮಾಡುವ ಸಾರ್ವಜನಿಕರು ಸಹ ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ : “ಈ ಕೂಡಲೇ ಇರಾನ್ ತೊರೆಯಿರಿ” – ಕದನ ವಿರಾಮದ ಬೆನ್ನಲ್ಲೇ ಕೇಂದ್ರ ಸರ್ಕಾರದಿಂದ ತುರ್ತು ಸಂದೇಶ!


















