ಉಡುಪಿ : ಅಜೆಕಾರು ಶಿರ್ಲಾಲಿನ ಪಂಗ್ಲಬೆಟ್ಟು ಶ್ರೀ ಬ್ರಹ್ಮಮುಗೇರಕಲ ಕ್ಷೇತ್ರದ ತನ್ನಿಮಾನಿಗ ನೇಮದಲ್ಲಿ 7ನೇ ತರಗತಿಯ ವಿದ್ಯಾರ್ಥಿಯೊಬ್ಬ ಹೆಣ್ಣು ದೈವದ ಕೋಲಕ್ಕೆ ಬಣ್ಣ ಹಚ್ಚಿ ಗಮನ ಸೆಳೆದಿದ್ದಾನೆ. ಈತನ ದೈವ ಕುಣಿತ ಈಗ ವೈರಲ್ ಆಗುತ್ತಿದೆ. ಇದು ಅನುವಂಶೀಯವಾಗಿ ಈತನಿಗೆ ಬಂದ ಸಿದ್ದಿ ಎಂದು ಹೇಳಲಾಗುತ್ತಿದೆ.
ಶಿರ್ಲಾಲು ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಸಮರ್ಥ್ ಎನ್ನುವ ಹುಡುಗ ದೈವ ನರ್ತನವನ್ನು ಮಾಡಿ ಸಣ್ಣ ವಯಸ್ಸಿನಲ್ಲೇ ತಮ್ಮ ಅಜ್ಜನ ಮತ್ತು ತಂದೆಯ ಕಸುಬನ್ನು ಮುಂದುವರಿಸಿಕೊಂಡು ಹೋಗಿದ್ದಾನೆ. ಈತನ ಧಾರ್ಮಿಕ ನಂಬಿಕೆಗೆ ಸ್ಥಳೀಯರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಅಜ್ಜನನ್ನು ನೋಡಿ ಕಲಿತದ್ದು ಒಂದು ಕಡೆಯಾದರೆ, ತಂದೆ ಹರೀಶ ಅವರ ಮಾರ್ಗದರ್ಶನಲ್ಲಿ ಸಮರ್ಥ್, ತನ್ನಿಮಾನಿಗ ಹೆಣ್ಣು ದೈವದ ಬಣ್ಣ ಹಚ್ಚಿ ಕೋಲ ನಿರ್ವಹಿಸಿದ್ದಾನೆ. ಪೂರ್ವಜರು ಆರಾಧಿಸಿಕೊಂಡು ಬಂದಿರುವ ಕಲೆಯನ್ನು ಬಾಲಕ ಸಣ್ಣ ವಯಸ್ಸಿನಲ್ಲೇ ಕಲಿತು ಕೋಲ ಕಟ್ಟಿರುವುದು ಸ್ಥಳೀಯವಾಗಿ ಪ್ರಶಂಸೆಗೆ ಪಾತ್ರವಾಗಿದೆ.
ಇದನ್ನೂ ಓದಿ : ಪತಿಯನ್ನು ಬಿಟ್ಟು ಪ್ರಿಯಕರನೊಟ್ಟಿಗೆ ಹೊರಟ ಯುವತಿ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು!



















