ಬೆಂಗಳೂರು : ರಾಜ್ಯಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡಬೇಕು ಎಂದು ಬಯಸುತ್ತಿರುವವರಿಗೆ ಶುಭ ಸಮಾಚಾರ ದೊರೆತಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಆರೋಗ್ಯ ಮಿಷನ್‌ನಲ್ಲಿ ಖಾಲಿ ಇರುವ 35 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ (NHM Karnataka Recruitment 2026) ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ವಿವರ ಇಲ್ಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ಆರೋಗ್ಯ ಮಿಷನ್, ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ: 35
ಹುದ್ದೆ ಹೆಸರು: ಪ್ರೋಗ್ರಾಂ ಅಸಿಸ್ಟಂಟ್ ಇತ್ಯಾದಿ
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ
ಸಂದರ್ಶನದ ದಿನಾಂಕ: ಏಪ್ರಿಲ್ 13
32 ವ್ಯಾಕ್ಸಿನ್ ಕೋಲ್ಡ್ ಚೈನ್ ಮ್ಯಾನೇಜರ್, 1 ಎನ್ ಯುಎಚ್ಎಂ ಕನ್ಸಲ್ಟಂಟ್ ಹಾಗೂ 2 ಪ್ರೋಗ್ರಾಂ ಅಸಿಸ್ಟಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ nhm.karnataka.gov.in ಗೆ ಭೇಟಿ ನೀಡಬಹುದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ, ವಿಶೇಷವಾಗಿ ಬಡವರು ಮತ್ತು ದುರ್ಬಲ ಗುಂಪುಗಳಿಗೆ ಕೈಗೆಟುಕುವ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಕರ್ನಾಟಕದಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಸ್ಥಾಪಿಸಲಾಗಿದೆ.
ಸಂದರ್ಶನ ನಡೆಯುವ ಸ್ಥಳ
Office of the Chief Administrative Officer National Health Mission (NHM) 1st Floor, West Wing, Arogya Soudha Magadi Road, 1st Cross, Bengaluru – 560023. ಬೆಳಗ್ಗೆ 11 ಗಂಟೆಯಿಂದ ಸಂದರ್ಶನ ಆರಂಭವಾಗಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : SSLC ಹಿಂದಿ ಗ್ರೇಡ್ ವಿವಾದ – ರಾಜ್ಯಪಾಲರ ವಿರುದ್ಧ ಸಿಡಿದೆದ್ದ ಕರವೇ!


















