ಬೆಂಗಳೂರು: ಮಹಿಳಾ ಕಸ್ಟಮ್ಸ್ ಅಧಿಕಾರಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದ್ದು,, ದೂರಿನ ಆಧಾರದ ಮೇರಿಗೆ ಉದ್ಯಮಿ ಎಂ. ಕೃಪಲಾನಿಯನ್ನು ಪೊಲೀಸು ಬಂಧಿಸಿದ್ದಾರೆ.
ಮಹಿಳಾ ಅಧಿಕಾರಿಗೆ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ತನ್ನ ಇಚ್ಛೆಯಂತೆ ನಡೆದುಕೊಳ್ಳುವಂತೆ ಒತ್ತಾಯಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಿರುಕುಳಕ್ಕೆ ಬೇಸತ್ತ ಮಹಿಳಾ ಅಧಿಕಾರಿ ದೂರು ನೀಡಿದ ನಂತರ ಆರಂಭದಲ್ಲಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ತನಿಖೆಗಾಗಿ ಇಂದಿರಾನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಈ ಪ್ರಕರಣದ ತನಿಖೆಯನ್ನು ಪುಲಕೇಶಿನಗರ ವಿಭಾಗದ ಎಸಿಪಿ ಮತ್ತು ಪಿಐ ನೇತೃತ್ವದಲ್ಲಿ ನಡೆಸಲಾಗಿದ್ದು, ಅವರ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಮಹಿಳಾ ಅಧಿಕಾರಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಎಲೆಕ್ಟ್ರಾನಿಕ್ ವ್ಯವಹಾರ ನಡೆಸುತ್ತಿದ್ದ ಕೃಪಲಾನಿ ಸುಮಾರು ಒಂಬತ್ತು ವರ್ಷಗಳ ಹಿಂದೆ ಪರಿಚಯ ಬೆಳೆಸಿ, ಮದುವೆಯ ಆಮಿಷ ನೀಡಿ ನಂಬಿಕೆ ಗಳಿಸಿದ್ದನು ಎನ್ನಲಾಗಿದೆ. ನಂತರ ಆಕೆಯಿಂದ ಕಸ್ಟಮ್ಸ್ ಇಲಾಖೆಯ ಲೂಪ್‌ಹೋಲ್‌ಗಳ ಮಾಹಿತಿ ಪಡೆದು ದುರುಪಯೋಗಪಡಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೆಲವು ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಣ ವಸೂಲಿ ಮಾಡಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಇದಕ್ಕೂ ಮುನ್ನ ಕೃಪಲಾನಿಯ ತಾಯಿ ತನ್ನ ಮಗ ನಾಪತ್ತೆಯಾಗಿದ್ದಾನೆಂದು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದನು. ಆದರೆ ಕೃಪಲಾನಿ ಉದ್ದೇಶಪೂರ್ವಕವಾಗಿ ಹೋಟೆಲ್‌ನಲ್ಲಿ ಅಡಗಿದ್ದದ್ದು ಬಹಿರಂಗವಾಗಿ, ನ್ಯಾಯಾಲಯವು ಎರಡು ಲಕ್ಷ ರೂಪಾಯಿ ದಂಡ ವಿಧಿಸಿದ್ದನು. ಈತನ ಮೇಲೆ ಹಿಂದೆ ಕುಡಿದು ಮಹಿಳಾ ಅಧಿಕಾರಿಗಳೊಂದಿಗೆ ಅಸಭ್ಯ ವರ್ತನೆ ನಡೆಸಿದ ಆರೋಪವೂ ದಾಖಲಾಗಿದೆ.
ಈತನ ಜಾಲಕ್ಕೆ ಇನ್ನೂ ಹಲವರು ಸಿಲುಕಿರುವ ಸಾಧ್ಯತೆ ಇರುವುದರಿಂದ, ಯಾರಿಗಾದರೂ ಅನ್ಯಾಯವಾಗಿದ್ದರೆ ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : RCB vs SRH ಪಂದ್ಯದ ವೇಳೆ ಮೊಬೈಲ್ ಕಳ್ಳತನ ಕೇಸ್.. ಇದುವರೆಗೂ 51 ಮೊಬೈಲ್‌ಗಳು ಜಪ್ತಿ



















