ಕಲಬುರಗಿ : ಭೀಮ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಂದನೂರ್ ಗ್ರಾಮದಲ್ಲಿ ನಡೆದಿದೆ.
ಲಾಲ್ ಸಾಬ್ ಪಟೇಲ್ (19) ಮೃತ ವಿದ್ಯಾರ್ಥಿ. ಗೆಳೆಯರೊಂದಿಗೆ ಭೀಮಾ ನದಿಯಲ್ಲಿ ಈಜಲು ಹೋದಾಗ ಈ ಅವಘಡ ಸಂಭವಿಸಿದೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಲಾಲಸಾಬ್ ಪಟೇಲ್, ನೀರಿನ ಸೆಳೆತಕ್ಕೆ ಸಿಲುಕಿ ಲಾಲ್ ಸಾಬ್ ಪಟೇಲ್ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನಾ ಸಂಬಂಧ ಜೇವರ್ಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : RCB vs SRH ಪಂದ್ಯದ ವೇಳೆ ಮೊಬೈಲ್ ಕಳ್ಳತನ ಕೇಸ್.. ಇದುವರೆಗೂ 51 ಮೊಬೈಲ್‌ಗಳು ಜಪ್ತಿ



















