ದಾವಣಗೆರೆ : ಅನ್ನಭಾಗ್ಯ ನೀಡ್ತಿರೋದು ಕೇಂದ್ರ ಸರ್ಕಾರ, ಅದರ ಮೇಲಿರುವ ಎರಡು ರೂಪಾಯಿ ಚೀಲ ಕೊಡ್ತಿರೋದು ಮಾತ್ರ ಸಿದ್ದರಾಮಯ್ಯ ಸರ್ಕಾರ ಎಂದು ಕಾಂಗ್ರೆಸ್ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಇಂದು ದಾವಣಗೆರೆಯ ಹದಡಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಪರ ವಿಪಕ್ಷ ನಾಯಕ ಆರ್ ಅಶೋಕ್, ಬಿ. ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದ್ದಾರೆ. ಈ ವೇಳೆ ಆರ್ ಅಶೋಕ್ ಮಾತನಾಡಿ, ಒಬ್ಬ ಸಾಮಾನ್ಯ ಕಾರ್ಯಕರ್ತನ ವಿರುದ್ದ ಇಡೀ ಕಾಂಗ್ರೆಸ್ ಸರ್ಕಾರ ಬಂದು ದಾವಣಗೆರೆಯಲ್ಲಿ ಕೂತಿದೆ. ಅವರೆಲ್ಲ ಬರೀ ಕೈಯಲ್ಲಿ ಬಂದಿಲ್ಲ, ಚೀಲದಲ್ಲಿ ಹಣ ತಂದಿದ್ದಾರೆ. ಒಂದೊಂದು ಬೂತಲ್ಲಿ ಮೂವರು ಶಾಸಕ, ಸಚಿವರು ಇದ್ದಾರೆ. ಇಡೀ ಸರ್ಕಾರವೇ ಬಂದು ಬೂತ್‌ಗಳಲ್ಲಿ ಕೂತಿದೆ ಎಂದು ಹರಿಹಾಯ್ದಿದ್ದಾರೆ.
ಮುಂದುವರೆದ ಮಾತನಡಿದ ಅವರು, ಸಿದ್ದರಾಮಯ್ಯ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಬಡವರನ್ನು ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದಾರೆ. ಅವರು ಬಂದಿರೋದು ಶ್ರೀನಿವಾಸ್ ದಾಸ್ ಕರಿಯಪ್ಪನ ಪರ ಪ್ರಚಾರಕ್ಕೆ. ಶ್ರೀಮಂತರಿಗೆ ಯಾರೂ ವೋಟ್ ಹಾಕಬೇಡಿ ಅಂತ ಹೇಳಿದ್ದಾರೆ. ಹಾಗಂದ್ರೆ ಬಡವರಾದ ಶ್ರೀನಿವಾಸ್ ದಾಸ್ ಕರಿಯಪ್ಪರಿಗೆ ವೋಟ್ ಹಾಕಿ ಅಂತ ಅರ್ಥ. ದಯವಿಟ್ಟು ನೀವೆಲ್ಲರೂ ಸಿದ್ದರಾಮಯ್ಯ ಹೇಳಿದಂಗೆ ಬಡವರಾದ ಶ್ರೀನಿವಾಸ್ ದಾಸ್ ಕರಿಯಪ್ಪನವರಿಗೆ ಮತ ಹಾಕಿ ಎಂದು ಆರ್.ಅಶೋಕ್ ಹೇಳಿದ್ದಾರೆ.
ಇದನ್ನೂ ಓದಿ : ಕಾರು ಲಾರಿಗೆ ಡಿಕ್ಕಿ – ನವವಿವಾಹಿತೆ ಸೇರಿ ಇಬ್ಬರು ದುರ್ಮರಣ.. ಪತಿ ಗಂಭೀರ!



















