ಮಂಗಳೂರು : ನಸುಕಿನ ವೇಳೆ ಮೀನು ಹಿಡಿಯಲು ಫಲ್ಗುಣಿ ನದಿಗೆ ಸಣ್ಣ ದೋಣಿಯಲ್ಲಿ ತೆರಳಿದ್ದ ಮೂವರು ಯುವಕರಲ್ಲಿ ಇಬ್ಬರು ನೀರುಪಾಲಾಗಿ ಮೃತಪಟ್ಟ ಘಟನೆ ಕಾವೂರಿನ ಕುಂಜತ್‌ಬೈಲಿನಲ್ಲಿ ನಡೆದಿದೆ.
ಕುಂಜತ್‌ಬೈಲ್ ನಿವಾಸಿಗಳಾದ ಗಣೇಶ (28) ಹಾಗೂ ರಾಯಲ್ (27) ಮೃತರು. ಮಾಹಿತಿಗಳ ಪ್ರಕಾರ ನಸುಕಿನ ವೇಳೆ 1:30ರ ಸುಮಾರಿಗೆ ಮೀನು ಹಿಡಿಯಲೆಂದು ಮೂವರು ಸಣ್ಣ ದೋಣಿಯಲ್ಲಿ ತೆರಳಿದ್ದರು. ನದಿ ಮಧ್ಯದಲ್ಲಿದ್ದಾಗ ದೋಣಿ ಇದ್ದಕ್ಕಿದ್ದಂತೆ ಮಗುಚಿದೆ. ಈ ವೇಳೆ ಈಜು ಬಾರದ ಗಣೇಶ್ ಹಾಗೂ ರಾಯಲ್ ಮುಳುಗಿ ಮೃತಪಟ್ಟರೆ, ನಿತೇಶ್ (29) ಈಜಿ ದಡ ಸೇರಿದ್ದಾರೆ ಎಂದು ತಿಳಿದುಬಂದಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ಮುಳುಗು ತಜ್ಞರು ಗಣೇಶ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ ರಾಯಲ್ ಎಂಬವರ ಪತ್ತೆಗೆ ಶೋಧ ನಡೆಯುತ್ತಿದೆ. ಘಟನಾ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ | ರಾಷ್ಟ್ರಪತಿ ದ್ರೌಪದಿ ಮುರ್ಮು



















