ಮಂಗಳೂರು : ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರಿನ ಬಂಟ್ವಾಳ ತಾಲೂಕು ಸಜಿಪಮುನ್ನೂರು ,ದಾಸರಗುಡ್ಡೆ ಎಂಬಲ್ಲಿ ನಡೆದಿದೆ.
ಉಳ್ಳಾಲ ತಾಲೂಕಿನ ಬೋಳಿಯಾರು ಗ್ರಾಮದ ಭಾರತಿ (48) ಎಂಬುವವರೇ ಗಾಯಗೊಂಡ ಮಹಿಳೆ. ಇವರು ಬೆಳಗ್ಗೆ ಮಗಳು ದೀಪಶ್ರೀ ಅವರೊಂದಿಗೆ ಗುಳಿಗಜ್ಜ ಕಟ್ಟೆಗೆ ಕಾಣಿಕೆ ಹಾಕುವ ಸಲುವಾಗಿ ಬಂದಿದ್ದರು. ಮೆಲ್ಕಾರ್-ಮುಡಿಪು ರಾಜ್ಯ ಹೆದ್ದಾರಿಯನ್ನು ದಾಟಿ ರಸ್ತೆಯ ಅಂಚಿಗೆ ತಲುಪುತ್ತಿದ್ದಂತೆ, ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಅತೀ ವೇಗವಾಗಿ ಬಂದ ಕಾರು ಇವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಭಾರತಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪಾನಿಪುರಿ ತಿನ್ನುತ್ತಿದ್ದ ಯುವತಿ ಕಲ್ಲು ಎಸೆದ ಆರೋಪ.. ಸ್ಥಳೀಯರಿಂದ ಬಿತ್ತು ಗೂಸಾ!



















