ಮಂಡ್ಯ : ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ನಡೆಯುವ ಐತಿಹಾಸಿಕ ಬಂಗಾರದ ಪಲ್ಲಕ್ಕಿ ಉತ್ಸವಕ್ಕೆ ದಲಿತ ಸಮುದಾಯಕ್ಕೆ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ಉತ್ಸವವನ್ನು ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಸಮುದಾಯಗಳ ನಡುವೆ ಸಾಮರಸ್ಯ ಬೆಳೆಸುವ ಉದ್ದೇಶದಿಂದ ರಾಮಾನುಜಾಚಾರ್ಯರು ಪ್ರಾರಂಭಿಸಿದ ಈ ಪಲ್ಲಕ್ಕಿ ಉತ್ಸವದಲ್ಲಿ ದಲಿತ ಸಮುದಾಯ ಪ್ರಮುಖ ಪಾತ್ರವಹಿಸುತ್ತದೆ.
ಪ್ರತಿ ವರ್ಷ ವೈರಮುಡಿ ಬ್ರಹ್ಮೋತ್ಸವದ 7ನೇ ದಿನ ಈ ಬಂಗಾರದ ಪಲ್ಲಕ್ಕಿ ಉತ್ಸವ ನಡೆಯುವುದು ಸಂಪ್ರದಾಯವಾಗಿದೆ. ವಿಶೇಷವಾಗಿ ಮೈಸೂರು ನಗರದ ಅಶೋಕಪುರಂ ನಿವಾಸಿಗಳನ್ನು ಆಹ್ವಾನಿಸಿ ಉತ್ಸವ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆಹ್ವಾನ ಪತ್ರಿಕೆ ನೀಡದಿರುವುದು ಹಾಗೂ ಸಮುದಾಯವನ್ನು ಪರಿಗಣಿಸದಿರುವುದು ಬೇಸರಕ್ಕೆ ಕಾರಣವಾಗಿದೆ ಎಂದು ಅಶೋಕಪುರಂ ನಿವಾಸಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ : ಕರಗದ ಸಿದ್ಧತೆ ಪರಿಶೀಲಿಸಿದ ಕೇಂದ್ರ ನಗರ ಪಾಲಿಕೆ ಆಯುಕ್ತ



















