ಮೈಸೂರು: ಖರ್ಚಿಗೆ ಹಣ ನೀಡಿಲ್ಲವೆಂದು ಕೋಪಗೊಂಡ ಯುವಕರು ಮಂಗಳಮುಖಿಯರ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಿರುವ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ.
ಆನಮ್ ಎಂಬ ಮಂಗಳಮುಖಿಯ ಬಳಿ ಅಮೃತ ಬಡಾವಣೆಯ ಕೆಲ ಯುವಕರು ಖರ್ಚಿಗೆ ಹಣ ಕೇಳಿದ್ದಾರೆ. ಆದರೆ ಆನಮ್ ಹಣ ನೀಡಲು ನಿರಾಕರಿಸಿದ ಹಿನ್ನೆಲೆ ಯುವಕರು ಗಲಾಟೆ ಪ್ರಾರಂಭಿಸಿದ್ದಾರೆ. ಈ ವೇಳೆ ತನ್ನ ಸ್ನೇಹಿತೆಯಾದ ಪಾರಿಯನ್ನು ಆನಮ್ ಕರೆಸಿಕೊಂಡಿದ್ದಾಳೆ. ಗೌಸಿಯಾನಗರದಿಂದ ಸ್ಥಳಕ್ಕೆ ಬಂದ ಪಾರಿಯ ಮೇಲೂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸಂಬಂಧ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : ದಾವಣಗೆರೆ : ಕಾರು ಅಡ್ಡಗಟ್ಟಿ ಸಿನಿಮಾ ಸ್ಟೈಲ್‌ನಲ್ಲಿ ರಾಬರಿ!


















