ಮೈಸೂರು : ಮೈಸೂರು ಜಿಲ್ಲೆಯ ನಂಜನಗೂಡಿನ ಪ್ರಸಿದ್ಧ ನಂಜುಂಡೇಶ್ವರನ ದೊಡ್ಡ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ತಂದೆ ಮಗನ ಸ್ಥಿತಿ ಚಿಂತಾಜನಕವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಂಜನಗೂಡಿನ ಶ್ರೀರಾಂಪುರ ಬಡಾವಣೆಯ ರಂಗಯ್ಯನ ಮಗ ರಂಗಸ್ವಾಮಿ 52 ವರ್ಷ ಮತ್ತು ಆತನ ಪುತ್ರ ಅಪ್ಪು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪಂಚ ಮಹಾರಥೋತ್ಸವ ಸಾಗುವ ಸಂದರ್ಭದಲ್ಲಿಈ ಅವಘಡ ಸಂಭವಿಸಿದ್ದು, ಭಾರಿ ಭಕ್ತ ಸಮೂಹದ ಮಧ್ಯ ಸಿಲುಕಿ ಮಗನಿಗೆ ಕಾಲು ಮುರಿದರೇ, ತಂದೆಯ ಸ್ಥಿತಿ ಚಿಂತಾಜನಕವಾಗಿದೆ
ಗಾಯಗೊಂಡವರಿಗೆ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ದೊಡ್ಡ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಲಾಗಿದೆ.
1999ರಲ್ಲಿ ರಥದ ಚಕ್ರಕ್ಕೆ ಸಿಲುಕಿ ಒಬ್ಬ ಮೃತಪಟ್ಟು ಮೂವರು ಕಾಲು ಕಳೆದುಕೊಂಡಿದ್ದರು. ಇದೀಗ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಭಕ್ತರ ಕಾಲ್ತುಳಿತದಿಂದ ಅಪ್ಪ ಮಗ ಸಿಲುಕಿ ಮತ್ತೆ ಅವಘಡಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸುಲಭ ಕ್ಯಾಚ್ ಕೈಚೆಲ್ಲಿದ್ರೂ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ.. ಫ್ಯಾನ್ಸ್ ಖುಷ್!


















