ವಿಜಯನಗರ: ಗಲ್ಪ್ ರಾಷ್ಟ್ರಗಳಲ್ಲಿ ಯುದ್ಧ ಹಿನ್ನೆಲೆ ಏಕಾಏಕಿ ಆಟೋ ಎಲ್‌ಪಿಜಿ (LPG) ಗ್ಯಾಸ್ ಕಂಪನಿಗಳು ಗ್ಯಾಸ್ ದರವನ್ನು ಏರಿಕೆ ಮಾಡಿದ್ದಾರೆ. ಇದರಿಂದ ಕಂಗಲಾದ ಆಟೋ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದರು.
ಆಟೋ LPG ಗ್ಯಾಸ್ ಬಂಕ್ ಮಾಲೀಕರು ಏಕಾಏಕಿ 15 ರೂ. ದರ ಏರಿಕೆ ಮಾಡಿದ ಆಟೋ ಚಾಲಕರು ಗಾಬರಿಯಾಗಿದ್ದರು. ಈ ವೇಳೆ ಹೊಸಪೇಟೆ ಡಿವೈಎಸ್ಪಿ ಡಾ. ಮಂಜುನಾಥ್ ತಳವಾರ್ ನೇತೃತ್ವದಲ್ಲಿ, ಆಟೋ ಚಾಲಕರು, ಗ್ಯಾಸ್ ಮಾಲೀಕರ ನಡುವೆ ಮಧ್ಯಸ್ಥಿಕೆವಹಿಸಿ ಗ್ಯಾಸ್ ದರವನ್ನು ಇಳಿಸುವಂತೆ ಎಚ್ಚರಿಕೆ ನೀಡಿದ್ದರು.
ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಗ್ಯಾಸ್ ಏಜೆನ್ಸಿ ಮಾಲೀಕರು ಆದೇಶ ವಾಪಾಸ್ ಪಡೆದು ಆಟೋ LPG ಗ್ಯಾಸ್ ದರವನ್ನು ಇಳಿಸಿದ್ದಾರೆ ಎಂದು ವಿಜಯನಗರದ ಆಟೋ ಚಾಲಕರ ಸಂಘದ ಅಧ್ಯಕ್ಷ ಕೆಎಂ ಸಂತೋಷ ತಿಳಿಸಿದ್ದಾರೆ.
ಇದನ್ನೂ ಓದಿ ; ಪೆಟ್ರೋಲ್, ಡೀಸೆಲ್ ಸಿಗಲ್ಲ ಎಂಬ ವದಂತಿ : ಕ್ಯಾನ್, ಡ್ರಮ್ ಹಿಡಿದು ಬಂಕ್‌ಗೆ ಮುಗಿಬಿದ್ದ ಕೊಪ್ಪಳ ಮಂದಿ


















