ಬೆಂಗಳೂರು : ಏಪ್ರಿಲ್ 1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಹಾಗಾಗಿ, ಬ್ಯಾಂಕ್ ಸೇರಿ ಯಾವುದೇ ಸಂಸ್ಥೆಯಲ್ಲಿ ಆಡಿಟಿಂಗ್ ಸೇರಿ ಹಲವು ಪ್ರಕ್ರಿಯೆಗಳು ಭರದಿಂದ ಸಾಗುತ್ತಿರುತ್ತವೆ.
ಇನ್ನು, 2026ರ ಏಪ್ರಿಲ್‌ನಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತವೆ. ಕರ್ನಾಟಕದಲ್ಲೂ ಹಬ್ಬ, ದಿನಾಚರಣೆ, ವಾರಾಂತ್ಯದ ರಜೆಗಳು (Bank Holiday Calendar) ಸೇರಿ ಹಲವು ದಿನ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ, ಗ್ರಾಹಕರು ರಜಾಪಟ್ಟಿಯನ್ನು ಗಮನಿಸಿಕೊಂಡು ಬ್ಯಾಂಕ್ ಗಳಿಗೆ ತೆರಳುವುದು ಒಳಿತು. ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳ ಕುರಿತ ಮಾಹಿತಿ ಇಲ್ಲಿದೆ.
ಹೀಗಿದೆ ಏಪ್ರಿಲ್ ತಿಂಗಳ ರಜಾಪಟ್ಟಿ |
ದಿನಾಂಕ ವಾರ ಸಂದರ್ಭ
ಏಪ್ರಿಲ್ 1 ಬುಧವಾರ ಬ್ಯಾಂಕ್ ಗಳ ವಾರ್ಷಿಕ ಖಾತೆ ಮುಕ್ತಾಯ (Annual Closing)
ಏಪ್ರಿಲ್ 2 ಗುರುವಾರ ಗುಡ್ ಫ್ರೈಡೇ
ಏಪ್ರಿಲ್ 5 ಭಾನುವಾರ ವಾರದ ರಜೆ
ಏಪ್ರಿಲ್ 11 ಶನಿವಾರ ಎರಡನೇ ಶನಿವಾರ (ಬ್ಯಾಂಕ್ ರಜೆ)
ಏಪ್ರಿಲ್ 12 ಭಾನುವಾರ ವಾರದ ರಜೆ
ಏಪ್ರಿಲ್ 14 ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
ಏಪ್ರಿಲ್ 19 ಭಾನುವಾರ ವಾರದ ರಜೆ
ಏಪ್ರಿಲ್ 25 ಶನಿವಾರ ನಾಲ್ಕನೇ ಶನಿವಾರ (ಬ್ಯಾಂಕ್ ರಜೆ)
ಏಪ್ರಿಲ್ 26 ಭಾನುವಾರ ವಾರದ ರಜೆ
ಗಮನಿಸಬೇಕಾದ ಅಂಶ
ಏಪ್ರಿಲ್ 1ರಂದು ಬ್ಯಾಂಕ್ ಗಳಲ್ಲಿ ಸಾರ್ವಜನಿಕ ವ್ಯವಹಾರ ಇರುವುದಿಲ್ಲ, ಕೇವಲ ಆಂತರಿಕ ಕೆಲಸಗಳು ನಡೆಯುತ್ತವೆ. ಬ್ಯಾಂಕ್ ರಜೆ ಇದ್ದರೂ ಎಟಿಎಂ, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ. ಹಬ್ಬಗಳ ಆಚರಣೆಯ ಆಧಾರದ ಮೇಲೆ ಕೆಲವು ರಜೆಗಳು ಒಂದು ದಿನ ಹೆಚ್ಚು ಕಡಿಮೆ ಆಗಬಹುದು.
ಇದನ್ನೂ ಓದಿ : ಚಿನ್ನ, ಬೆಳ್ಳಿ, ಹಣ ಆಯ್ತು ಈಗ ಸಿಲಿಂಡರ್ ಮೇಲೂ ಖದೀಮರ ಕಣ್ಣು..!


















