ಚಿಕ್ಕಮಗಳೂರು : ಚಲಿಸುತ್ತಿದ್ದ ವೇಳೆಯೇ KSRTC ಬಸ್ ಟೈರ್ ಕಳಚಿದ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಬೈರೆಗುಡ್ಡ ಸಮೀಪ ನಡೆದಿದೆ.
ಚಿಕ್ಕಮಗಳೂರು ಘಟಕಕ್ಕೆ ಸೇರಿದ KSRTC ಬಸ್ ಇದಾಗಿದ್ದು, ಹೌಸಿಂಗ್ ಕಟ್ ಆಗಿ ಮುಂಭಾಗದ ಟೈರ್ ಕಳಚಿಕೊಂಡರೂ ಸಹ ಬಸ್ ಕೆಲ ದೂರ ಸಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ.
ಚಿಕ್ಕಮಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ KSRTC ಬಸ್‌ನ ಟೈರ್ ನಡು ರಸ್ತೆಯಲ್ಲಿ ಕಟ್ ಆಗಿದ್ದಕ್ಕೆ, ನಿರ್ವಹಣೆ ಕೊರತೆಯಿಂದ ಈ ಅವಘಢ ಸಂಭವಿಸಿದೆ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿಗರ ಗಮನಕ್ಕೆ.. ಇನ್ಮುಂದೆ ಕಸ ವಿಂಗಡಿಸದಿದ್ದರೆ ಬೀಳುತ್ತೆ ಭಾರೀ ಫೈನ್!



















