ನೆಲಮಂಗಲ: ವಿದ್ಯಾರ್ಥಿನಿಯ ಗೌರವ, ಖಾಸಗಿತನ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾದ ಶಿಕ್ಷಕನೇ, ತರಗತಿಯಲ್ಲೇ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ್ದಾನೆ. ಈ ಹಿನ್ನಲೇ ಕ್ಯಾಂಪಸ್‌ನಲ್ಲಿ ಗಲಾಟೆ ನಡೆದ ಘಟನೆ ನೆಲಮಂಗಲ ತಾಲೂಕಿನ ಟಿ.ಬೇಗೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಮಾಹಿತಿಯ ಪ್ರಕಾರ, ತರಗತಿ ನಡೆಯುತ್ತಿರುವ ವೇಳೆಯಲ್ಲೇ ಪ್ರೊಫೆಸರ್ ಅಬ್ದುಲ್ ಎಂಬವರು ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರಪೋಸ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ತರಗತಿಯಲ್ಲೇ ಪ್ರಶ್ನೆ ಕೇಳಿ, ಬಳಿಕ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಈ ಘಟನೆಗೆ ಕೋಪಗೊಂಡ ಇತರ ವಿದ್ಯಾರ್ಥಿಗಳು ಪ್ರೊಫೆಸರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಹೊಡೆದಿದ್ದಾರೆ. ನಂತರ ಕಾರಿನ ಬಳಿ ಕೂಡ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ತಿಳಿದುಬಂದಿದೆ. ಈ ವೇಳೆ ಭಯಗೊಂಡ ಪ್ರೊಫೆಸರ್ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ : ನಂಜುಂಡೇಶ್ವರನ ದರ್ಶನ ಪಡೆದು ಬರುವಷ್ಟರಲ್ಲಿ ಮನೆ ಖಾಲಿ ಖಾಲಿ.. ಕಳ್ಳರ ಕೈಚಳಕಕ್ಕೆ ಬೆಚ್ಚಿದ ದಂಪತಿ



















