ಚಾಮರಾಜನಗರ | ಚಾ.ನಗರದ ಚೆನ್ನಮಲ್ಲಿಪುರ ಗ್ರಾಮದ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಭೀತಿ ಹೆಚ್ಚಾಗಿದೆ. ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ದೃಶ್ಯ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಒಂದು ದಿನದ ಹಿಂದೆಯಷ್ಟೇ ಒಂದೂವರೆ ವರ್ಷದ ಮರಿ ಹುಲಿಯನ್ನು ಅರಣ್ಯ ಇಲಾಖೆ ಸೆರೆಹಿಡಿದಿದ್ದು, ಇದೀಗ ತಾಯಿ ಹುಲಿ ಪ್ರತ್ಯಕ್ಷವಾಗಿರುವುದು ಜನರಲ್ಲಿ ಗಾಬರಿಯನ್ನುಂಟುಮಾಡಿದೆ.
ತಾಯಿ ಹುಲಿ ಮತ್ತೊಂದು ಮರಿ ಜೊತೆ ಇದೇ ಪ್ರದೇಶದಲ್ಲಿ ವಾಸ್ತವ್ಯ ಹೂಡಿರುವ ಸಾಧ್ಯತೆ ಇರುವುದರಿಂದ ರೈತರು ಜಮೀನಿಗೆ ಹೋಗಲು ಜನ ಹೆದರುತ್ತಿದ್ದಾರೆ. ಹುಲಿ ದಾಳಿ ಭೀತಿ ಹೆಚ್ಚಾಗಿರುವ ಹಿನ್ನೆಲೆ, ತಕ್ಷಣವೇ ಹುಲಿಯನ್ನು ಸೆರೆಹಿಡಿಯುವಂತೆ ರೈತರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ ; ವಿಧಾನಸೌಧಕ್ಕೆ ಶಾಸಕರ ಭೇಟಿಗೆ ಬಂದಿದ್ದ ವ್ಯಕ್ತಿ ಬ್ಯಾಗ್ನಲ್ಲಿ 6 ಲಕ್ಷ ರೂ. ಪತ್ತೆ.. ದುಡ್ಡು ತಂದಿದ್ಯಾಕೆ?


















