ಬೆಂಗಳೂರು : ಕರ್ನಾಟಕ ವಿಧಾನಸಭೆಯ ಕಲಾಪವು ಇಂದು ರಾಜಕೀಯ ಕಾಲೆಳೆಯುವಿಕೆ, ಹಾಸ್ಯ ಮತ್ತು ಭವಿಷ್ಯದ ಮುಖ್ಯಮಂತ್ರಿ ಕುರಿತಾದ ಚರ್ಚೆಗಳಿಗೆ ಸಾಕ್ಷಿಯಾಗಿದೆ. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರ ಕಾಲೆಳೆಯುತ್ತಲೇ ಚಾಣಾಕ್ಷ ಉತ್ತರ ನೀಡಿದ್ದಾರೆ.
ಹೌದು.. ಸಿಎಂ ಬದಲಾವಣೆ ವಿಚಾರದ ಬಗ್ಗೆ ಸದನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಎಲ್ಲಿವರೆಗೂ ಸಿಎಂ ಆಗಿರಿ ಎನ್ನುವರೋ ಅಲ್ಲಿವರೆಗೆ ಸಿಎಂ ಆಗಿರ್ತೇನೆ ಎಂದು ಹೇಳಿದ್ದಾರೆ.
ಈ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ನಿಮ್ಮ ಪಕ್ಕದಲ್ಲಿರುವವವರು ಕೂಡ ತುಂಬಾ ಕನಸುಗಳು ಇಟ್ಟುಕೊಂಡಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಅಶೋಕ್ ನೀನು ಏನೇ ಕಿತಾಪತಿ ಮಾಡಿದರೂ ನಮ್ಮ ಪಕ್ಷದವರು ಅದಕ್ಕೆ ಮನ್ನಣೆ ಕೊಡಲ್ಲ. ಸಿಎಂ ಆಗಬೇಕು ಎಂದು ನಿನಗೂ ಕನಸು ಇರುತ್ತೆ, ಬೇರೆಯವರಿಗೂ ಕನಸು ಇರುತ್ತೆ. ನೋಡು ಅಲ್ಲಿ ವಿಜಯೇಂದ್ರ ಕಾಯ್ತಾ ಕೂತಿದ್ದಾರೆ. ನೀನು ಏನೇ ಮಾಡಿದರೂ ವಿಜಯೇಂದ್ರ ಯಾರಿಗೂ ಸೀಟ್ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ನಗುತ್ತಲೇ ಮಾತಿನ ಪಂಚ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಬ್ರೇಕ್ ಫೇಲ್ ಆಗಿ ಆಟೋ, ಫ್ರೂಟ್ಸ್ ಶಾಪ್‌ಗೆ ಡಿಕ್ಕಿ ಹೊಡೆದ KSRTC ಬಸ್.. ತಪ್ಪಿದ ಭಾರೀ ಅನಾಹುತ!


















