ತುಮಕೂರು : ವಿದ್ಯಾರ್ಥಿನಿಯ ಕಾಲಿನ ಮೇಲೆಯೇ ಬಸ್‌ನ ಟೈರ್ ಹರಿದು ಕಾಲು ಮುರಿದಿರುವ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಹರ್ಷಿತ (17) ಕಾಲು ಮುರಿತಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ.
ಮಾಹಿತಿಗಳ ಪ್ರಕಾರ, ಬಸ್ ತುಮಕೂರಿನಿಂದ ಮಧುಗಿರಿಗೆ ಹೊರಟಿತ್ತು. ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಕಾರಣ ನೂಕಾಟ ತಳ್ಳಾಟ ಉಂಟಾಗಿ ಈ ಅವಘಡ ಸಂಭವಿಸಿದೆ.
ಬಸ್ ಹತ್ತಲು ಹೋದ ವೇಳೆ ಹರ್ಷಿತ ಕಾಲಿನ ಮೇಲೆ ಹತ್ತಿದ ಬಸ್ ಟೈರ್ ಹತ್ತಿದ ಪರಿಣಾಮ ಕಾಲು ಮುರಿದಿದೆ. ಕೂಡಲೇ ಸಾರ್ವಜನಿಕರು ಆಂಬುಲೆನ್ಸ್ ಮೂಲಕ ಹರ್ಷಿತಾಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಸಿಲಿಂಡರ್ ಬುಕಿಂಗ್ ನಿಯಮ ಮತ್ತಷ್ಟು ಕಠಿಣ.. ಇನ್ನು 35 ದಿನಗಳ ನಂತರವಷ್ಟೇ ಬುಕಿಂಗ್‌ಗೆ ಅವಕಾಶ!


















