ತುಮಕೂರು | ಗ್ಯಾಸ್ ಅಭಾವದ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಿರಾ ನಗರದಲ್ಲಿ ಜನರು ಸಿಲಿಂಡರ್‌ಗಾಗಿ ಮುಗಿಬಿದ್ದು, ಗೋದಾಮು ಮುಂದೆ ಉದ್ದ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ತುಮಕೂರು ಜಿಲ್ಲೆ ಶಿರಾದ ಉಪಕಾರ್ ಗ್ಯಾಸ್ ಏಜೆನ್ಸಿ ಗೋದಾಮು ಮುಂದೆ ಬೆಳಗ್ಗಿನಿಂದಲೇ ಜನರು ಸಾಲುಗಟ್ಟಿ ನಿಂತು, ಸಿಲಿಂಡರ್ ಪಡೆಯಲು ತೀವ್ರ ಪರದಾಟ ನಡೆಸುತ್ತಿದ್ದಾರೆ. ಗ್ರಾಮೀಣ ಭಾಗಗಳಿಂದಲೂ ಜನರು ಸಿಲಿಂಡರ್ ಹಿಡಿದು ನಗರಕ್ಕೆ ಆಗಮಿಸಿದ್ದು, ಒಂದು ಸಿಲಿಂಡರ್‌ಗಾಗಿ ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೆಟ್‌ವರ್ಕ್ ಸಮಸ್ಯೆಯಿಂದ ಗ್ಯಾಸ್ ಬುಕಿಂಗ್ ಆಗದೆ ಇರುವ ಕಾರಣ ಜನರು ನೇರವಾಗಿ ಗೋದಾಮಿಗೆ ಹರಿದುಬಂದಿದ್ದಾರೆ. ಗ್ಯಾಸ್ ಕೊರತೆ ಇಲ್ಲವೆಂದು ಏಜೆನ್ಸಿ ಹೇಳುತ್ತಿದ್ದರೂ ಜನರು ಅದನ್ನು ನಂಬದೆ ಸಾಲಿನಲ್ಲಿ ನಿಂತು, ಮುಂದಿನ ದಿನಗಳ ಬಗ್ಗೆ ಭಯ ಮತ್ತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಸಿಎಸ್‌ಕೆಗೆ ಆಸ್ಟ್ರೇಲಿಯಾ ವೇಗಿ ಸ್ಪೆನ್ಸರ್ ಜಾನ್ಸನ್ ಸೇರ್ಪಡೆ..!


















