ಬೆಳಗಾವಿ | ಬೆಳಗಾವಿಯಲ್ಲಿ ಇಂದು ಒಂದೂವರೆ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ನಗರವೇ ತತ್ತರಿಸಿದೆ. ಚೆನ್ನಮ್ಮ ವೃತ್ತ, ಕ್ಯಾಂಪ್, ಖಡೇಬಜಾರ್ ಹಾಗೂ ಪೋರ್ಟ್ ರೋಡ್ ಪ್ರದೇಶಗಳಲ್ಲಿ ರಸ್ತೆಗಳು ನದಿಯಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.
ಹಠಾತ್ ಸುರಿದ ಮಳೆಯ ಆರ್ಭಟಕ್ಕೆ ನಗರದ ಜನರು ಬೆಚ್ಚಿಬಿದ್ದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳೊಳಗೆ ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ದಿನನಿತ್ಯದ ಚಟುವಟಿಕೆಗಳು ಸಂಪೂರ್ಣವಾಗಿ ವ್ಯತ್ಯಯಗೊಂಡಿವೆ.
ಮಳೆ ಇನ್ನೂ ಜಿಟಿಜಿಟಿಯಾಗಿ ಮುಂದುವರಿಯುತ್ತಿದ್ದು, ಪರಿಸ್ಥಿತಿ ಗಂಭೀರವಾಗುವ ಆತಂಕ ಎದುರಾಗಿದೆ. ನೀರು ಹರಿದು ಹೋಗದ ಕಾರಣ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ತುರ್ತು ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : 13 ವರ್ಷಗಳ ನರಕಯಾತನೆಗೆ ಮುಕ್ತಿ.. ಸುಪ್ರೀಂನಿಂದ ದಯಾಮರಣ ಪಡೆದುಕೊಂಡಿದ್ದ ಹರೀಶ್ ರಾಣಾ ನಿಧನ!


















