ಬೀದರ್ : ಮದ್ಯ ಮಾರಾಟ ಬಂದ್ ಮಾಡುವಂತೆ ಬಸವಕಲ್ಯಾಣ ಶಾಸಕ ಶರಣು ಸಲಗರ್ ಮುಂದೆ ಮಹಿಳೆಯರು ಕಣ್ಣೀರು ಹಾಕಿ ತಮ್ಮ ಅಳಲು ತೋಡಿಕೊಡಿದ್ದಾರೆ.
ಬಸವಕಲ್ಯಾಣ ತಾಲೂಕಿನ ನೀಲಕಂಠವಾಡಿ ಗ್ರಾಮಕ್ಕೆ ಶಾಸಕರ ಭೇಟಿ ವೇಳೆ, ಸರಾಯಿ ಕುಡಿದು ಸರಣಿ ಸಾವಾಗಿವೆ, ನಮ್ಮ ಊರಲ್ಲಿ 8 ಕಡೆ ಮದ್ಯ ಮಾರಾಟ ಮಾಡ್ತಿದ್ದಾರೆ ನಿಮ್ಮ ಕಾಲಿಗೆ ಬೀಳ್ತೀವಿ ನಮ್ಮ ಊರಲ್ಲಿ ಸರಾಯಿ ಬಂದ್ ಮಾಡಿ ಎಂದು ಶಾಸಕರ ಮುಂದೆ ಕಣ್ಣೀರು ಹಾಕಿದ್ದಾರೆ.
ಕಾಲೇಜ್ ಯುವಕರು ಸೇರಿದಂತೆ ನೀಲಕಂಠವಾಡಿ ಗ್ರಾಮದಲ್ಲಿ ಈಗಾಗಲೇ ಮದ್ಯ ಕುಡಿದು 22 ಜನ ಸಾವನಪ್ಪಿದ್ದಾರೆ. ಕಿರಾಣಿ ಅಂಗಡಿ ಸೇರಿದಂತೆ ಊರಲ್ಲಿ ಹೆಜ್ಜೆ ಹೆಜ್ಜೆಗೂ ಮಧ್ಯ ಮಾರಾಟ ಮಾಡ್ತಿದ್ದಾರೆ. ದೂರು ಕೊಟ್ಟರೆ ಪೊಲೀಸರು ಬರ್ತಾರೆ, ಸುಮ್ನೆ ನೋಡ್ಕೊಂಡ್ ಹೋಗ್ತಾರೆ ಅಷ್ಟೇ. ಊರಲ್ಲಿ ಸಾಕಷ್ಟು ಜನ ಮಹಿಳೆಯರು ವಿಧವೇರಾಗಿದ್ದಾರೆ. ಹೇಗಾದರೂ ಮಾಡಿ ನೀಲಕಂಠವಾಡಿ ಗ್ರಾಮದ ಯುವಕರ ಜನರ ಭವಿಷ್ಯ ಕಾಪಾಡಿ ನಮ್ಮೂರಲ್ಲಿ ಸಾರಾಯಿ ಬಂದ್ ಮಾಡಿ ಎಂದು ಶಾಸಕ ಶರಣು ಸಲಗರ್ ಮುಂದೆ ಮಹಿಳೆಯರು ಬೇಡಿಕೊಂಡಿದ್ದಾರೆ.
ಇದನ್ನೂ ಓದಿ : ಹಣದಾಸೆಗೆ ನಕಲಿ ದಾಖಲು ಸೃಷ್ಟಿಸುವವರ ವಿರುದ್ದ ಮುಲಾಜಿಲ್ಲದೇ ಕಾನೂನು ಕ್ರಮ : ಶಿವಮೊಗ್ಗ ಡಿಸಿ ಎಚ್ಚರಿಕೆ!



















