ಬೆಂಗಳೂರು : ಸೈಬರ್ ವಂಚನೆಗಳ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ ಪ್ರತಿದಿನ ವಂಚನೆ ಪ್ರಕರಣಗಳು ಕೇಳಿಬರುತ್ತಲೇ ಇವೆ. ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣಗೊಳಿಸುವುದು, ಡಿಜಿಟಲ್ ಅರೆಸ್ಟ್, ವಿದೇಶದಿಂದ ಗಿಫ್ಟ್ ಪಾರ್ಸೆಲ್ ಸೇರಿ ಹಲವು ರೀತಿಯಲ್ಲಿ ವಂಚಿಸಲಾಗುತ್ತದೆ. ಹೀಗೆ, ವಂಚನೆ ನಡೆದಾಗ ಜನರು ಆನ್ ಲೈನ್ ಮೂಲಕವೇ ದೂರು ನೀಡಬಹುದಾಗಿದೆ. ಇದರಿಂದ ನಿಮ್ಮ ಖಾತೆಯ ಹಣ ಖಾಲಿಯಾಗದಂತೆ ನೋಡಿಕೊಳ್ಳುವ ಜತೆಗೆ ತನಿಖೆ ನಡೆಸಲಾಗುತ್ತದೆ. ಆನ್ ಲೈನ್ ಮೂಲಕ ಹೇಗೆ ದೂರು ನೀಡಬೇಕು ಎಂಬುದರ ಸ್ಟೆಪ್ ಬೈ ಸ್ಟೆಪ್ ಗೈಡೆನ್ಸ್ ಇಲ್ಲಿದೆ.
ಪೋರ್ಟಲ್ ನಲ್ಲಿ ದೂರು ದಾಖಲಿಸುವುದು ಹೇಗೆ?
• ಮೊದಲಿಗೆ ರಾಷ್ಟ್ರೀಯ ಸೈಬರ್ ಅಪರಾಧ ವೆಬ್ ಸೈಟ್ ಗೆ ಆಗಿರುವ cybercrime.gov.in ಗೆ ಭೇಟಿ ನೀಡಬೇಕು
• ಹಣಕಾಸು ವಂಚನೆ ಅಥವಾ ಇತರ ಸೈಬರ್ ಅಪರಾಧಗಳ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.
• ‘File a Complaint’ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, OTP ಮೂಲಕ ಲಾಗಿನ್ ಆಗಿ.
• ವಂಚನೆ ನಡೆದ ದಿನಾಂಕ ಮತ್ತು ಸಮಯ. ವಂಚನೆಗೀಡಾದ ಮೊತ್ತ. ಯಾವ ಮಾಧ್ಯಮದ ಮೂಲಕ ವಂಚನೆಯಾಗಿದೆ ಎಂಬುದರ ಮಾಹಿತಿ ನೀಡಿ. ಲಿಂಕ್ ಗಳನ್ನು ಒದಗಿಸಿ.
• ಹಣ ಕಡಿತವಾದ ಬ್ಯಾಂಕ್ ಸಂದೇಶ, ಬ್ಯಾಂಕ್ ಸ್ಟೇಟ್ ಮೆಂಟ್ ಅಥವಾ ಸ್ಕ್ರೀನ್ ಶಾಟ್ ಗಳನ್ನು ಅಪ್ ಲೋಡ್ ಮಾಡಿ.
• ಎಲ್ಲ ವಿವರಗಳನ್ನು ನೀಡಿದ ನಂತರ ದೂರನ್ನು ಸಲ್ಲಿಸಿ. ನಿಮಗೆ ಒಂದು Acknowledgment Number ದೊರೆಯುತ್ತದೆ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳಿ.
ಯಾವೆಲ್ಲ ದಾಖಲೆ ನೀಡಬೇಕು?
• ನಿಮ್ಮ ಆರು ತಿಂಗಳ ಬ್ಯಾಂಕ್ ವಹಿವಾಟು ವರದಿ ಅಥವಾ ಸ್ಟೇಟ್ ಮೆಂಟ್
• ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸೇರಿ ಯಾವುದೇ ಗುರುತಿನ ಚೀಟಿ
• ಸೈಬರ್ ವಂಚಕರು ಕಳುಹಿಸಿದ ಸಂದೇಶ, ಲಿಂಕ್ ಸ್ಕ್ರೀನ್ ಶಾಟ್ ಇತ್ಯಾದಿ
ಗಮನಿಸಿ: ರಾಷ್ಟ್ರೀಯ ಸಹಾಯವಾಣಿ 1930 ಗೆ ಕರೆ ಮಾಡುವ ಮೂಲಕವೂ ನೀವು ದೂರು ನೀಡಬಹುದು. ಆನ್ ಲೈನ್ ಮೂಲಕ ದೂರು ನೀಡಲು ಆಗದಿದ್ದರೆ ಕೂಡಲೇ ಬ್ಯಾಂಕ್ ಶಾಖೆಗಳಿಗೆ ತೆರಳಿಯೂ ದೂರು ನೀಡಬಹುದು.
ಇದನ್ನೂ ಓದಿ : RCB ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್ – IPL ಟಿಕೆಟ್ ಇದ್ರೆ ಮೆಟ್ರೋ ಪ್ರಯಾಣ ಫ್ರೀ ಫ್ರೀ ಫ್ರೀ!



















