ಬೆಂಗಳೂರು | ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ಕೇವಲ 7 ಸಾವಿರ ಇನ್ಸೆಂಟಿವ್ ಹಣ ಸಿಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕಂಪನಿಗೆ ಲಕ್ಷಾಂತರ ನಷ್ಟ ಉಂಟುಮಾಡಿದ್ದಾನೆ. ಈ ಮೂಲಕ ಸಣ್ಣ ವಿಚಾರ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಸುಭಾಷ್ ಎಂಬಾತ, ಇನ್ಸೆಂಟಿವ್ ನೀಡಲಿಲ್ಲ ಎಂದು ಕೋಪಗೊಂಡು Jio Fiber ಕಂಪನಿಗೆ ಸೇರಿದ ಟವರ್‌ನ MCB ಅನ್ನು ಆಫ್ ಮಾಡಿದ್ದಾನೆ. ಇದರ ಪರಿಣಾಮವಾಗಿ ವಿದ್ಯುತ್ ಪೂರೈಕೆ ಕಡಿತಗೊಂಡು ಸರ್ವರ್ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿವೆ.
ಸುಮಾರು ಮೂರು ಗಂಟೆಗಳ ಕಾಲ ಟವರ್ ಕಾರ್ಯನಿರ್ವಹಿಸದೆ ಇದ್ದ ಕಾರಣ, ಕಂಪನಿಗೆ ಸುಮಾರು 7 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಜೊತೆಗೆ ಅನೇಕ ಚಂದಾದಾರರು ನೆಟ್ವರ್ಕ್ ಸಮಸ್ಯೆಯಿಂದ ತೊಂದರೆ ಅನುಭವಿಸಿದ್ದಾರೆ.
ಘಟನೆ ಬಳಿಕವೂ ಆರೋಪಿ ತನ್ನ ವರ್ತನೆ ಬದಲಿಸದೆ, ಹಣ ನೀಡದಿದ್ದರೆ ಮತ್ತೆ ಇದೇ ರೀತಿಯ ಕೃತ್ಯ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳನ ಬಂಧನ!



















