ಬೆಂಗಳೂರು : : ನಮ್ಮ ಮೆಟ್ರೋ ವಿಸ್ತರಣೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದ್ದು, ಮೇ ತಿಂಗಳಿನಿಂದ ಪಿಂಕ್ ಲೈನ್‌ನಲ್ಲಿ 4ನೇ ಮೆಟ್ರೋ ಸಂಚಾರ ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಪಿಂಕ್ ಲೈನ್ ಮೆಟ್ರೋ ಸೇವೆಗಾಗಿ ನಾಲ್ಕನೇ ರೈಲು ಸೆಟ್ ಭಾನುವಾರ ಬೆಂಗಳೂರಿಗೆ ಬಂದಿಳಿದಿದೆ. ಆರು ಕೋಚ್‌ಗಳನ್ನು ಹೊಂದಿರುವ ಈ ರೈಲನ್ನು ಮಾರ್ಚ್ 13ರಂದು BEML ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ತರಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಈ ರೈಲನ್ನು ಕೊತ್ತನೂರು ಡಿಪೋದಲ್ಲಿನ ಇನ್ಸ್‌ಪೆಕ್ಷನ್ ಬೇ ಲೈನ್ (IBL) ಗೆ ಸ್ಥಳಾಂತರಿಸಿ ಅಗತ್ಯ ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಎಲ್ಲಾ ಪರೀಕ್ಷೆಗಳು ಮತ್ತು ನಿಯಮಾನುಸಾರ ಅನುಮತಿ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಈ ರೈಲು ಸೇವೆಗೆ ಸಿದ್ಧವಾಗಲಿದೆ.
ಪಿಂಕ್ ಲೈನ್‌ನ ಮೊದಲ ರೈಲನ್ನು BEML ಸಂಸ್ಥೆ 2025ರ ಡಿಸೆಂಬರ್ 11ರಂದು ಬಿಡುಗಡೆ ಮಾಡಿತ್ತು. ಬಳಿಕ ಫೆಬ್ರವರಿಯಲ್ಲಿ ಇನ್ನೂ ಎರಡು ರೈಲುಗಳನ್ನು ನಮ್ಗೆಮ ಮೆಟ್ರೋವು ಹಸ್ತಾಂತರಿಸಲಾಗಿತ್ತು. ಈಗ ನಾಲ್ಕನೇ ರೈಲು ಬಂದಿರುವುದರಿಂದ ಪಿಂಕ್ ಲೈನ್ ಸೇವೆ ಆರಂಭದ ಸಿದ್ಧತೆಗಳು ಮತ್ತಷ್ಟು ವೇಗ ಪಡೆದಿವೆ.
ಸುಮಾರು 7.5 ಕಿಲೋಮೀಟರ್ ಉದ್ದದ ಕಾಳೇನ ಅಗ್ರಹಾರ – ತಾವರೆಕೆರೆಯ ಪಿಂಕ್ ಲೈನ್ ಮಾರ್ಗದಲ್ಲಿ ಮೇ ತಿಂಗಳಲ್ಲಿ ಮೆಟ್ರೋ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಯೋಜಿಸಿದೆ.
ನೇರಳೆ ಮತ್ತು ಹಸಿರು ಮಾರ್ಗ ಪ್ರಯಾಣಿಕರಿಗೂ ಗುಡ್ ನ್ಯೂಸ್
ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ. TRSL ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಲೈನ್‌ಗಳಿಗಾಗಿ ಎರಡನೇ ಡಿಟಿಜಿ ರೈಲು ಸೆಟ್ ಅನ್ನು ಕಳುಹಿಸಿದೆ.
ಈ ರೈಲಿನ ಮೂರು ಕೋಚ್‌ಗಳನ್ನು ಮಾರ್ಚ್ 13ರಂದು ರವಾನಿಸಲಾಗಿದ್ದು, ಉಳಿದ ಮೂರು ಕೋಚ್‌ಗಳು ಮರುದಿನ ರಾತ್ರಿ ಕಳುಹಿಸಲಾಗಿದೆ. ಈ ರೈಲು ಈ ತಿಂಗಳ ಅಂತ್ಯದೊಳಗೆ ಪೀಣ್ಯಾ ಡಿಪೋ ತಲುಪುವ ಸಾಧ್ಯತೆ ಇದೆ.
ಈ ಎರಡು ಹೊಸ ರೈಲುಗಳು ಮೇ–ಜೂನ್ ವೇಳೆಗೆ ಪರ್ಪಲ್ ಮತ್ತು ಗ್ರೀನ್ ಲೈನ್‌ಗಳಲ್ಲಿ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಇದರಿಂದ ಪೀಕ್ ಅವಧಿಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ಕಡಿಮೆಯಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಖಾಲಿ ಹುದ್ದೆ ಭರ್ತಿಗೆ ಇಲ್ಲ ‘ಗ್ಯಾರಂಟಿ’!


















