ಬೆಂಗಳೂರು : ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 13ರಂದು ದೇಶದ ರೈತರ ಖಾತೆಗಳಿಗೆ ತಲಾ 2 ಸಾವಿರ ರೂ. ಜಮೆ ಮಾಡಲಿದ್ದಾರೆ. ಯೋಜನೆಯ 22ನೇ ಕಂತಿನ ಹಣವನ್ನು 9 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಅಸ್ಸಾಂನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಅವರು ಹಣ ಜಮೆ ಮಾಡಲಿದ್ದಾರೆ.
ಹಣ ಜಮೆ ಮಾಡುವುದಕ್ಕೂ ಮೊದಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇ-ಕೆವೈಸಿ ಪ್ರಕ್ರಿಯೆ ಮುಗಿಸದಿದ್ದರೆ ರೈತರ ಖಾತೆಗಳಿಗೆ ಹಣ ಜಮೆಯಾಗುವುದಿಲ್ಲ. ಹಾಗಾಗಿ, ರೈತರು ಮಾರ್ಚ್ 12ರಂದೇ ಇ-ಕೆವೈಸಿ ಪೂರ್ಣಗೊಳಿಸುವುದು ಸಕಲ ರೀತಿಯಲ್ಲಿ ಒಳಿತು.
ಇ-ಕೆವೈಸಿ ಪೂರ್ಣಗೊಳಿಸುವುದು ಹೇಗೆ?
ಒಟಿಪಿ ಆಧಾರಿತ (OTP-based) : ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, PM-Kisan ಪೋರ್ಟಲ್ ಮೂಲಕ ಉಚಿತವಾಗಿ ನೀವೇ ಮಾಡಬಹುದು.
ಬಯೋಮೆಟ್ರಿಕ್ ಆಧಾರಿತ : ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಭೇಟಿ ನೀಡಿ ಬಯೋಮೆಟ್ರಿಕ್ ಮೂಲಕ ಮಾಡಿಸಬಹುದು (ಇದಕ್ಕೆ ನಿಗದಿತ ಶುಲ್ಕವಿರುತ್ತದೆ).
ಮುಖದ ಗುರುತಿಸುವಿಕೆ (Face Authentication): ‘PM-Kisan’ ಮೊಬೈಲ್ ಆBಪ್ ಬಳಸಿ ಮುಖದ ಗುರುತಿಸುವಿಕೆಯ ಮೂಲಕವೂ ಇ-ಕೆವೈಸಿ ಮಾಡಬಹುದು.
ಆನ್ ಲೈನ್ ಮೂಲಕ ಇ-ಕೆವೈಸಿ ಮಾಡಿ
• ಮೊದಲಿಗೆ ಅಧಿಕೃತ pmkisan.gov.in ವೆಬ್ ಸೈಟ್ ಗೆ ಭೇಟಿ ನೀಡಿ.
• ಮುಖಪುಟದಲ್ಲಿರುವ ‘Farmers Corner’ ವಿಭಾಗದಲ್ಲಿ ‘e-KYC’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ‘Search’ ಬಟನ್ ಒತ್ತಿ.
• ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ‘Get OTP’ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ ಸಬ್ ಮಿಟ್ ಮಾಡಿದರೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ : ಬೆಂಗಳೂರಿಗರೇ.. ಇಂದು ನಗರದ ಈ ರಸ್ತೆಗಳತ್ತ ಹೋಗದಿರಿ, ಪರ್ಯಾಯ ಮಾರ್ಗದ ಮಾಹಿತಿ ಇಲ್ಲಿದೆ!



















