ಭಾರತ ಹಾಗೂ ನ್ಯೂಜಿಲೆಂಡ್ ಇಂದು ನಡುಯುವ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಟೀಂ ಇಂಡಿಯಾಗೆ ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ ತಂಡ ಶುಭಾಶಯ ಕೋರಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರ್‌ಸಿಬಿ, ಭಾರತೀಯ ಆಟಗಾರರ ಫೋಟೋಗಳನ್ನು ಹಂಚಿಕೊಂಡು ಟೀಂ ಇಂಡಿಯಾಗೆ ಬೆಂಬಲ ವ್ಯಕ್ತಪಡಿಸಿದೆ. “ಇಂದು 140 ಕೋಟಿ ಭಾರತೀಯರ ಹೃದಯಗಳು ಟೀಂ ಇಂಡಿಯಾದ ಜೊತೆಗಿವೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಹೊಸ ಇತಿಹಾಸ ಬರೆಯಲು ಸಿದ್ಧರಾಗಿ” ಎಂದು ಆರ್‌ಸಿಬಿ ತನ್ನ ಪೋಸ್ಟ್‌ನಲ್ಲಿ ಶುಭ ಹಾರೈಸಿದೆ.
ಟೀಂ ಇಂಡಿಯಾ ಫೈನಲ್‌ನಲ್ಲಿ ಜಯ ಸಾಧಿಸಿ ದೇಶಕ್ಕೆ ಗೌರವ ತಂದುಕೊಡಲಿ ಎಂದು ಅಭಿಮಾನಿಗಳು ಹಾಗೂ ಕ್ರೀಡಾ ಪ್ರೇಮಿಗಳು ಆಶಿಸುತ್ತಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ 2026 : ಸಂಜು ಸ್ಯಾಮ್ಸನ್ ಪಾಲಿಗೆ ಒಲಿದುಬಂದ ‘ಮರುಹುಟ್ಟು’, ಫೈನಲ್‌ನಲ್ಲಿ ಮಹತ್ವದ ಘಟ್ಟ!



















