ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ ಬೋದುರ ತಾಂಡಾದ ಗ್ರಾಮಸ್ಥರು ಮದ್ಯ ಮುಕ್ತ ಗ್ರಾಮಕ್ಕೆ ಸಂಕಲ್ಪ ಮಾಡಿದ್ದಾರೆ.
ನಿಡಶೇಸಿಯ ಅಭಿನವ ಕರಿಬಸವ ಸ್ವಾಮೀಜಿಗಳ ಮುಂದೆ ಇನ್ನ ಮುಂದೆ ಗ್ರಾಮದಲ್ಲಿ ಮದ್ಯಪಾನ, ಧೂಮಪಾನ, ಗುಟ್ಕಾ, ಇಸ್ಪೀಟ್ ಆಡಲ್ಲ ಎಂದು ಗ್ರಾಮಸ್ಥರು ಪ್ರಮಾಣ ಮಾಡಿದ್ದಾರೆ.
ಮದ್ಯಪಾನದಿಂದ ಗ್ರಾಮದಲ್ಲಿ ಆಗಾಗ ಗಲಾಟೆ, ಜಗಳ ನಡೆಯುವ ಹಿನ್ನಲೆ ಗ್ರಾಮದಲ್ಲಿ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮದ್ಯ ಮುಕ್ತ ಗ್ರಾಮ ಮಾಡಲು ಪಣ ತೊಟ್ಟಿದ್ದಾರೆ.
ಇದನ್ನೂ ಓದಿ : ಫೈನಲ್‌ಗೂ ಮುನ್ನ ಎಲೈಟ್ ಪಟ್ಟಿಗೆ ಸೇರಿದ ಜಸ್‌ಪ್ರೀತ್ ಬುಮ್ರಾ.. 500 ವಿಕೆಟ್‌ಗಳ ಸಾಧನೆ!



















