ಆನೇಕಲ್ : ಹೋಳಿ ಹಬ್ಬದ ಆಚರಣೆ ವೇಳೆ ಕುಡಿದ ಮತ್ತಿನಲ್ಲಿ ಎರಡು ಗುಂಪುಗಳ ನಡುವೆ ಭಾರೀ ಗಲಾಟೆ ನಡೆದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಸಮೀಪ ನಡೆದಿದೆ.
ಆನೇಕಲ್ ಸಮೀಪದ ವಿಎಸ್‌ಆರ್ ಬಾರ್ & ರೆಸ್ಟೋರೆಂಟ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದ ನಂತರ ಎರಡು ಗುಂಪುಗಳ ನಡುವೆ ಹೊಡೆದಾಟಕ್ಕೆ ತಿರುಗಿದೆ.
ಕುಡಿದ ನಶೆಯಲ್ಲಿ ಇದ್ದ ಯುವಕರು ಸಿನಿಮಾ ಸ್ಟೈಲ್‌ನಲ್ಲಿ ಪರಸ್ಪರ ಬಟ್ಟೆ ಹರಿದುಕೊಂಡು, ಕಾಲಿನಿಂದ ಒದ್ದು ಹಲ್ಲೆ ನಡೆಸಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಗಲಾಟೆಯಲ್ಲಿ ಭಾಗಿಯಾದವರು ಹೊರರಾಜ್ಯದ ಹಿಂದಿ ಭಾಷಿಕ ಕಾರ್ಮಿಕರು ಎಂದು ತಿಳಿದುಬಂದಿದೆ. ಬಾರ್ ಮುಂಭಾಗವೇ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ವಿಷಯ ತಿಳಿದು ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : GBA, BWSSB ಸೇರಿ 5 ಇಲಾಖೆ ಅಧಿಕಾರಿಗಳ ವಿರುದ್ಧ ಭಾರೀ ಭ್ರಷ್ಟಾಚಾರ ಆರೋಪ | ತನಿಖೆಗೆ N.R ರಮೇಶ್ ಆಗ್ರಹ!



















