ಚಾಮರಾಜನಗರ | ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಬಳಿ ಹರಿಯೋ ಕಾವೇರಿ ನದಿಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಮೃತಳನ್ನು ರಶ್ಮಿ (39) ಎಂದು ಗುರುತಿಸಲಾಗಿದೆ.
ಮೇಲ್ನೋಟಕ್ಕೆ ರಶ್ಮಿ ಕಾವೇರಿ ನದಿಗೆ ಹಾರಿ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಶ್ಮಿ ಮಂಡ್ಯ ಜಿಲ್ಲೆಯ ಬೆಳಕವಾಡಿ ಗ್ರಾಮದ ನಿವಾಸಿ ಲೋಕೇಶ್ ಎಂಬುವವರ ಪತ್ನಿ ಎಂದು ತಿಳಿದುಬಂದಿದೆ.
ಗಂಡ ಹಾಗೂ ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ವಾಸವಿದ್ದ ರಶ್ಮಿ, ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾಂಸರಿಕ ಗಲಾಟೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಆಯಾಮದಲ್ಲೂ ತನಿಖೆ ಮುಂದವರೆದಿದೆ.
ಇದನ್ನೂ ಓದಿ : 200 ಕಂಪನಿಗಳು, 20 ಸಾವಿರ ಜನರಿಗೆ ಜಾಬ್ | ಈ ಉದ್ಯೋಗ ಮೇಳವನ್ನು ಮಿಸ್ ಮಾಡಿಕೊಳ್ಳದಿರಿ!



















