ಬೆಂಗಳೂರು : ಇತ್ತೀಚೆಗೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಗೆಯುವಾಗ ನಿಧಿ ಪತ್ತೆಯಾಗಿದ್ದ ವಿಚಾರ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಬೆಂಗಳೂರಿನಲ್ಲೊಂದು ಘಟನೆ ಬೆಳಕಿಗೆ ಬಂದಿದ್ದು, ನಿಧಿ ಆಸೆಗಾಗಿ ಬಿಲ್ಡರ್ ಓರ್ವ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಅಗೆದಿರುವ ಘಟನೆ HRS ಲೇಔಟ್ನಲ್ಲಿ ಎಳ್ಳುಕುಂಟೆಯಲ್ಲಿ ನಡೆದಿದೆ.
ಅಪಾರ್ಟ್ಮೆಂಟ್ನ ಬೇಸ್ಮೆಂಟ್ನ ಹಿಂಭಾಗದಲ್ಲಿ ಅಗೆದಿರುವುದಾಗಿ ಬಿಲ್ಡರ್ ಸುಧಾಕರ್ ನಾಯ್ಡು ಎಂಬಾತನ ವಿರುದ್ಧ ಆರೋಪ ಕೇಳಿಬಂದಿದೆ. ಅಪಾರ್ಟ್ಮೆಂಟ್ನ ಹಿಂಭಾಗದಲ್ಲಿ ಹಳೆಯ ವೀರಗಲ್ಲು ಇದೆ. ಅದರ ಕೆಳಗಡೆ ನಿಧಿ ಇದೆ ಎಂದು ಸುಧಾಕರ್ ನಾಯ್ಡು ನಂಬಿದ್ದ. ಹೀಗಾಗಿ ಕಾಂಪೌಂಡ್ಗೆ ತಗಡಿನ ಶೀಟ್ ಹೊಡೆದು ಕವರ್ ಮಾಡಿ, ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಸ್ಥಳದಲ್ಲಿ ಅಗೆದಿದ್ದಾನೆ.
ಸುಧಾಕರ್ ಮಡಿಕೆ, ತೆಂಗಿನಕಾಯಿ ತಂದು ಪೂಜೆ ಪುನಸ್ಕಾರ ನೆರವೇರಸಿ ಬಳಿಕ ಅಗೆಯುವ ಕೆಲಸ ಶುರು ಮಾಡಿದ್ದ. ಸದ್ಯ ವಿಚಾರ ಗೊತ್ತಾಗಿ ಸುಧಾಕರ್ಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೆಚ್ಎಸ್ಆರ್ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಹಿಂದೂ ಮುಖಂಡ ಮಂಜು ಕೊಳಗೆ ಚಾಕು ಇರಿತ



















