ಉತ್ತರಕನ್ನಡ : ರಾಜ್ಯದಲ್ಲಿ ಕಾಡಾನೆ ಅಟ್ಟಹಾಸ ಹೆಚ್ಚಾಗಿದೆ. ಇದೀಗ ಕಾಡಾನೆ ದಾಳಿಯಿಂದ ದನದ ಕೊಟ್ಟಿಗೆ ಧ್ವಂಸವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಆಲೂರು ಗ್ರಾಮದಲ್ಲಿ ನಡೆದಿದೆ.
ಆಲೂರು ಗ್ರಾಮದ ನಿವಾಸಿ ಪುಂಡಲೀಕ ಜಾಧವ ಎಂಬುವವರಿಗೆ ಸೇರಿದ ಕೊಟ್ಟಿಗೆ ಧ್ವಂಸವಾಗಿದ್ದು, ಕೊಟ್ಟಿಗೆಗೆ ನುಗ್ಗಿದ ಕಾಡಾನೆಯಿಂದ ಎಮ್ಮೆ, ಕರುವಿಗೆ ಗಾಯಗಳಾಗಿದೆ.
ನಸುಕಿನ ವೇಳೆ ನಡೆದ ಈ ಕಾಡಾನೆ ದಾಳಿಯಿಂದ ರೈತರಿಗೆ ಆತಂಕ ಹೆಚ್ಚಾಗಿದೆ. ಕಾಡಾನೆಯನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ.
ಇದನ್ನೂ ಓದಿ : ದೇವಸ್ಥಾನದ ಜಾಗದಲ್ಲಿ ಮೇವು ಒಟ್ಟಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ!



















