ಬೆಂಗಳೂರು: ಮಾ.3ರಂದು ಕೇತುಗ್ರಸ್ತ ರಕ್ತಚಂದ್ರಗಹಣಸಂಭವಿಸಲಿದೆ. ಹೋಳಿ ಹಬ್ಬದಂದೇ ಬಾನಂಗಳದಲ್ಲಿ ಕೆಂಬಣ್ಣದ ಚಂದಿರನ ವಿಸ್ಮಯ ಗೋಚರವಾಗಲಿದೆ.
ಪಾಲ್ಗುಣ ಮಾಸದ ಹುಣ್ಣಿಮೆಯ ದಿನವೇ ಗ್ರಹಣ ಸಂಭವಿಸಲಿದ್ದು, ಭಾರತದಲ್ಲಿಯೂ ಗೋಚರವಾಗಲಿದೆ. ಜೊತೆಗೆ 25 ನಿಮಿಷದವರೆಗೆ ಕರ್ನಾಟಕದಲ್ಲಿಯೂ ಗ್ರಹಣ ಗೋಚರವಾಗಲಿದೆ.
ಭಾರತದಲ್ಲಿ ಮಾ.3ರಂದು ಮಧ್ಯಾಹ್ನ 3:20ಕ್ಕೆ ಗ್ರಹಣ ಆರಂಭವಾಗಿ ಸಂಜೆ 6:47ಕ್ಕೆ ಮುಕ್ತಾಯವಾಗಲಿದ್ದು, ಒಟ್ಟು 25 ನಿಮಿಷಗಳ ಕಾಲ ಗ್ರಹಣ ಇರಲಿದೆ.
ರಕ್ತಚಂದ್ರಗ್ರಹಣ ಸಮಯದಲ್ಲಿ ಏನು ಮಾಡಬೇಕು?
– ಗ್ರಹಣದ ಮುನ್ನ ಮತ್ತು ಗ್ರಹಣ ಮೋಕ್ಷ ಬಳಿಕ ಮನೆಯನ್ನು ಮತ್ತು ದೇವರ ಕೋಣೆಯನ್ನು ಗಂಗಾಜಲದಿಂದ ಶುದ್ಧೀಕರಿಸಬೇಕು
– ಚಂದ್ರ ಗ್ರಹಣದ ಸಮಯದಲ್ಲಿ ಧ್ಯಾನ, ಭಜನೆ ಮತ್ತು ಕೀರ್ತನೆಗಳನ್ನು ಮಾಡಬೇಕು.
– ಚಂದ್ರ ದೇವನಿಗೆ ಸಂಬಂಧಿಸಿದ ಮಂತ್ರಗಳನ್ನು, ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು.
– ಚಂದ್ರಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡಬೇಕು.
– ದೇವರ ವಿಗ್ರಹಗಳ ಮೇಲೆ ಗಂಗಾಜಲ ಸಿಂಪಡಿಸಿ ಗ್ರಹಣದ ಅವಧಿಯಲ್ಲಿ ದರ್ಬೆಯ ಬಂಧನದಲ್ಲಿಡಬೇಕು.
– ಆಹಾರ ಹಾಗೂ ಪಾನೀಯಗಳ ಮೇಲೆ ದರ್ಬೆ ಅಥವಾ ತುಳಸಿಯನ್ನು ಹಾಕಿಟ್ಟರೇ ಉತ್ತಮ
ಗ್ರಹಣ ದಿನದಂದು ಏನು ಮಾಡಬಾರದು?
– ಗ್ರಹಣ ಅಂದ್ರೆ ಸೂತಕ ಕಾಲ. ಹೀಗಾಗಿ ಶುಭಕಾರ್ಯ ನಿಷಿದ್ಧ.
– ಗ್ರಹಣದ ದಿನದಂದು ಮದುವೆ, ಗೃಹ ಪ್ರವೇಶ ಆಚರಿಸುವುದು, ಹೊಸ ಕಾರು ಖರೀದಿಸುವುದು ಅಥವಾ ಹೊಸ ವೃತ್ತಿಜೀವನವನ್ನು ಪ್ರಾರಂಭಿಸುವುದು ಒಳ್ಳೆಯದಲ್ಲ.
– ಗ್ರಹಣ ಸಮಯದಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಮಾಡಬಾರದು.
– ಗರ್ಭಿಣಿಯರು ಹೊರಗೆ ಓಡಾಡಬಾರದು.
ಇದನ್ನೂ ಓದಿ : ಹೋಳಿ ಹಬ್ಬದ ಆಚರಣೆಗೆ ಪೊಲೀಸ್ ಇಲಾಖೆ ತಯಾರಿ | 15 ಅಂಶಗಳ ಆದೇಶ ಬಿಡುಗಡೆ



















