ಬೆಂಗಳೂರು : ನೀವು ಚಿತ್ರದುರ್ಗ ಜಿಲ್ಲೆಯವರಾ? ನಿಮ್ಮ ಜಿಲ್ಲೆಯಲ್ಲಿಯೇ ಕೈತುಂಬ ಸಂಬಳದ ಉದ್ಯೋಗ ಪಡೆಯಬೇಕು ಎಂದು ಸಿದ್ಧತೆ ನಡೆಸುತ್ತಿದ್ದೀರಾ? ಹಾಗಾದರೆ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ. ಚಿತ್ರದುರ್ಗದ ಅಮೃತಾ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ (Amrutha Ayurveda Medical College & Hospital Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ: ಅಮೃತಾ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ
ಹುದ್ದೆ ಹೆಸರು: ಬೋಧಕ ಸಿಬ್ಬಂದಿ
ಒಟ್ಟು ಹುದ್ದೆಗಳು: ವಿವಿಧ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: ಮಾರ್ಚ್ 12
ರೀಡರ್ ಹಾಗೂ ಲೆಕ್ಚರರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅಮೃತಾ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಅಧಿಸೂಚನೆಯಲ್ಲಿ ನಮೂದಿಸಿದಂತೆ ವಿದ್ಯಾರ್ಹತೆ ಪೂರ್ಣಗೊಂಡಿರಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಮೊದಲು ಪರಿಶೀಲನೆ ಮಾಡಲಾಗುತ್ತದೆ. ಇದಾದ ಬಳಿಕ ಸಂದರ್ಶನಕ್ಕೆ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಅಧಿಕೃತ ವೆಬ್ ಸೈಟ್ ಆಗಿರುವ amruthaayurcta.org ಗೆ ಭೇಟಿ ನೀಡಬೇಕು
ನಿಮಗೆ ಬೇಕಾದ ಹುದ್ದೆಯ ಅಧಿಸೂಚನೆಯನ್ನು ಓದಬೇಕು
ಅರ್ಜಿಯ ಪ್ರಿಂಟೌಟ್ ತೆಗೆದುಕೊಂಡು, ಭರ್ತಿ ಮಾಡಬೇಕು
ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ principalamrutha2016@gmail.com, amruthaayurtca@gmail.com ಗೆ ಮೇಲ್ ಮಾಡಬೇಕು.
ಇದನ್ನೂ ಓದಿ : ಬ್ಲಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲು ‘ಲಿಟ್ಟರ್ ಪಿಕ್ಕಿಂಗ್’ ಯಂತ್ರ ಖರೀದಿಸಿದ GBA



















