ಹಾಸನ : ಕೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹಣಕಾಸು ವಿಚಾರಕ್ಕೆ ಸ್ನೇಹಿತರೇ ಹತ್ಯೆ ಮಾಡಿ ಕೆರೆಗೆ ಎಸೆದಿದ್ದಾರೆ ಎಂದು ಕುಟುಂಬ ಸದಸ್ಯರ ಆರೋಪ ಮಾಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಂತನಹಳ್ಳಿಯ ಜಗದೀಶ್(44) ಮೃತ ವ್ಯಕ್ತಿ. ಅಂತನಹಳ್ಳಿಯ ಬಸವರಾಜ್, ಮಂಜೇಗೌಡ ಹಾಗು ಮಲ್ಲವ್ವನಘಟ್ಟದ ಸೋಮಶೇಖರ್ ಹಾಗೂ ದಿಲೀಪ್ ಎಂಬುವವರು ಕರೆದೊಯ್ದು ಕಂಠಪೂರ್ತಿ ಕುಡಿಸಿ ಕೊಲೆಗೈದು, ಬಳಿಕ ಶವವನ್ನು ಕೆರೆಗೆ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೃತ ಜಗದೀಶ್, ಬಸವರಾಜ್ ಹಾಗೂ ಮಂಜೇಗೌಡನಿಂದ ಸಾಲ ಪಡೆದಿದ್ದರು, ಹಾಗಾಗಿ, ಆರೋಪಿಗಳು 10 ಸಾವಿರ ಹಣಕ್ಕೆ 50 ಸಾವಿರ ಬಡ್ಡಿಗಾಗಿ ಪದೇ ಪದೆ ಪೀಡಿಸುತ್ತಿದ್ದರು. ಹಣಕ್ಕೆ ಬಡ್ಡಿ ಕೊಂಡದಿದ್ದರೆ ಪಾರ್ಟಿ ಕೊಡಿಸು ಎಂದು ಒತ್ತಾಯ ಮಾಡ್ತಿದ್ದರು. ಹಾಗೆಯೇ ನಿನ್ನೆ ಕೂಡ ಜೊತೆಯಲ್ಲೆ ಕುಡಿದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು, ಕೊಲೆ ಮಾಡಿ ಕೆರೆಗೆ ಬಿದ್ದಿರೊದಾಗಿ ಫೋನ್ ಮಾಡಿ ಆರೋಪಿಗಳು ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ವೇಳೆ ಕೆರೆಯಲ್ಲಿ ಶವ ಪತ್ತೆಯಾಗಿದೆ. ಮನೆಯ ಮಗನ ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮಟ್ಟಿದೆ. ಚನ್ನರಾಯಪಟ್ಟಣ ನಗರ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.
ಇದನ್ನೂ ಓದಿ : ದೇವರಕೊಂಡ-ರಶ್ಮಿಕಾ ಧರಿಸಿದ್ದ ಕೆಜಿಗಟ್ಟಲೆ ಚಿನ್ನದ ಆಭರಣಕ್ಕೆ 10 ತಿಂಗಳ ಶ್ರಮ!



















