ದಾವಣಗೆರೆ : ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದು, ರಾಜ್ಯಕ್ಕೆ 52 ಸಾವಿರ ಕೋಟಿ ಹಣವನ್ನು ಹಳೆ ರೈಲ್ವೆ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ದಾವಣಗೆರೆ, ಚಿತ್ರದುರ್ಗ, ತುಮಕೂರು ರೈಲ್ವೆ ಮಾರ್ಗ ಕೂಡ ಇದೆ. ಪ್ರಸಕ್ತ ವರ್ಷ 7800 ಕೋಟಿ ಹಣವನ್ನು ಈ ರೈಲ್ವೆ ಮಾರ್ಗಕ್ಕೆ ಕೊಟ್ಟಿದ್ದಾರೆ. ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ದಾವಣಗೆರೆ ತುಮಕೂರು ಚಿತ್ರದುರ್ಗ ನೇರ ರೈಲು ಮಾರ್ಗ ಕಾಮಗಾರಿ ಪರಿಶೀಲನೆ ಬಳಿಕ ದಾವಣಗೆರೆ ತಾಲೂಕಿನ ಅನಗೋಡು ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ವಿಕಸಿತ ಭಾರತ ದೇಶದ ಅಭಿವೃದ್ಧಿಯ ಮುನ್ಸೂಚನೆಯಾಗಿದೆ. ದೇಶದಲ್ಲಿ ಅಭಿವೃದ್ಧಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರೋದು ರೈಲ್ವೆ ಇಲಾಖೆ. ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎನ್ನುವುದು ಮುಖ್ಯ ಅಲ್ಲ, ಕರ್ನಾಟಕ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪಣ ತೊಟ್ಟಿದೆ ಎಂದಿದ್ದಾರೆ.
ನಮ್ಮಲ್ಲಿ 2 ಸಾವಿರಕ್ಕೂ ಹೆಚ್ಚು ಎಕರೆ ಭೂಮಿ ಈ ಯೋಜನೆಗೆ ಒಳಪಟ್ಟಿದೆ. 264 ಎಕರೆ ಬಿಟ್ಟು ಉಳಿದ ಎಲ್ಲಾ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕು ಇನ್ನೆರಡ್ಮೂರು ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಜೆಜೆಎಂ ಯೋಜನೆಯನ್ನೇ ತೆಗೆದುಹಾಕಬೇಕು ಎಂದು ಪ್ರಧಾನಿಗಳು ಇದ್ದರು. ಸರ್ವೇ ಮಾಡಿಸಿ ಇನ್ಮುಂದೆ ಜೆಜೆಎಂ ಯೋಜನೆಯಲ್ಲಿ ಮೇಲ್ಮಟ್ಟದಲ್ಲಿದ್ದ ಅಧಿಕಾರ ಗ್ರಾಪಂ, ಪುರಸಭೆ ನಗರಸಭೆಗೆ ಕೊಡಲು ಮುಂದಾಗಿದ್ದೇವೆ ಎಂದು ತೀಳಿಸಿದ್ದಾರೆ.
ಇದನ್ನೂ ಓದಿ : ಚೊಚ್ಚಲ ಮಹಿಳಾ BPL ಟೂರ್ನಿಗೆ ಸಿದ್ಧತೆ | ಸ್ಮೃತಿ ಸೇರಿ ಭಾರತೀಯ ಆಟಗಾರ್ತಿಯರಿಗೆ ಬಾಂಗ್ಲಾ ಮುಕ್ತ ಆಹ್ವಾನ



















