ಬೆಂಗಳೂರು : ಬಿಜೆಪಿ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನ, ಸೈದ್ದಾಂತಿಕ ನೆಲಗಟ್ಟಿನ ಮೇಲೆ ಪಕ್ಷ ಕಟ್ಟೋದನ್ನ ಕಲಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪಿ ರಾಜೀವ್, ನಿತಿನ್ ನಬಿನ್ ಅವರು ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಸದಸ್ಯತ್ವ ಅಭಿಯಾನ, ಬೂತ್, ಮಂಡಲ, ಜಿಲ್ಲಾ ಅಧ್ಯಕ್ಷರ ನೇಮಕವಾಗಿದೆ. ಪಂಡಿತ್ ದೀನ್ ದಯಾಳ್ ಪ್ರಶಿಕ್ಷಣ ಮಹಾಭಿಯಾನ ಮಾಡಲು ಕರೆ ನೀಡಿದ್ದಾರೆ. ದೆಹಲಿಯಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶಿಕ್ಷಣ ನಡೆದಿದೆ. ರಾಜ್ಯಾಧ್ಯಕ್ಷರು ಇದೇ ಫೆಬ್ರವರಿ 26ರಂದು ಕಾರ್ಯಗಾರ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಆಗಮಿಸಲಿದ್ದಾರೆ. 1,156 ಸ್ಥಳಗಳಲ್ಲಿ ಪ್ರಶಿಕ್ಷಣ ವರ್ಗ ನಡೆಯಲಿದೆ. 200 ಜನರಂತೆ 2,2,038 ಜನರಿಗೆ ಪ್ರಶಿಕ್ಷಣ ನೀಡಲಾಗುವುದು. ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕತೆ ಬೆಳೆಸುವುದು. ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಕಾರ್ಯಕರ್ತರವರೆಗೂ ರಾಷ್ಟ್ರೀಯ ವಿಚಾರಗಳ ಬಗ್ಗೆ ತಿಳಿಸಿಕೊಡುವುದು. ಒಟ್ಟು ಎಂಟು ಅಂಶಗಳನ್ನಿಟ್ಟುಕೊಂಡು ಪ್ರಶಿಕ್ಷಣ ನೀಡಲಾಗುವುದು. ರಾಷ್ಟ್ರದ ರೀತಿಯಲ್ಲೇ, ರಾಜ್ಯದ ಪ್ರಶಿಕ್ಷಣ ಕೂಡ ನಡೆಯಲಿದೆ ಎಂದಿದ್ದಾರೆ.
ಇದನ್ನೂ ಓದಿ : ತುಮಕೂರಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲರಿ ಶಾಪ್ ದರೋಡೆ | ಖದೀಮರನ್ನ ಹಿಡಿದಿದ್ದೇ ರೋಚಕ..!



















