ಚಿಕ್ಕಬಳ್ಳಾಪುರ : ಇಡೀ ದೇಶದ್ಯಾಂತ ಮನರೇಗಾ ಉಳಿಸಿ ಅಭಿಯಾನ ಪ್ರಾರಂಭವಾಗಿದ್ದು, ಕರ್ನಾಟಕದಲ್ಲೂ ಕೂಡ ಇದೀಗ ಆರಂಭವಾಗುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮನರೇಗಾ ಯೋಜನೆ ರದ್ದು ಮಾಡಿ ಜಿ ರಾಮ್ ಜಿ ಕಾಯ್ದೆಯನ್ನ ಜಾರಿಗೆ ಮಾಡಿದೆ, ಇದನ್ನ ತರೋ ಅಗತ್ಯ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಚಿಕ್ಕಬಳ್ಳಾಪುರದಲ್ಲಿ ಕೈನಾಯಕರು ಆಯೋಜಿಸಿದ ಮನರೇಗಾ ಬಚಾವೂ ಅಭಿಯಾನದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2005ರಲ್ಲಿ ಮನಮೋಹನ್ ಸಿಂಗ್ ಇದ್ದಾಗ ಮನರೇಗಾ ಯೋಜನೆ ಜಾರಿಗೆ ತಂದರು. ಇದು ಮಹಿಳೆಯರಿಗೆ, ಬಡವರಿಗೆ, ದುರ್ಬಲ ವರ್ಗದವರಿಗೆ ಉದ್ಯೋಗ ಕೊಡಬೇಕು ಯೋಜನೆಯಾಗಿದೆ. ಉದ್ಯೋಗ. ಆಹಾರ, ಶಿಕ್ಷಣದ ಹಕ್ಕನ್ನು ಗಮನದಲ್ಲಿಟ್ಡುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಈಗ ಬೇಡ ಅಂತಾ ಹೊಸ ಕಾಯ್ದೆಯನ್ನ ಜಾರಿಗೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಮನರೇಗಾ ಕಾಯ್ದೆಯಿಂದ 12 ಕೋಟಿ 16 ಲಕ್ಷ ಉದ್ಯೋಗ ಪಡೆದುಕೊಳ್ತಿದ್ರು, ಇದರಲ್ಲಿ ಹೆಚ್ಚಿನ ಮಟ್ಟಿಗೆ ಮಹಿಳೆಯರೇ ಇದ್ದರು. ಒಟ್ಟು 28 % ಪರಿಶಿಷ್ಟ ಜಾತಿ, ವರ್ಗದವರು ಉದ್ಯೋಗ ಪಡೆದುಕೊಳ್ಳುತ್ತಿದ್ದರು ಅಂತಹ ಯೋಜನೆಯನ್ನು ರದ್ದು ಮಾಡಲು ಮುಂದಾಗಿದ್ದಾರೆ ಎಂದು ಅಸಮಧಾನ ಹೊರಕಾಹಿದ್ದಾರೆ.
ಮನರೇಗಾದಲ್ಲಿ ಗಾಂಧೀಜಿ ಅವರ ಹೆಸರು ಕೂಡ ಕೈ ಬಿಟ್ಡಿದ್ದಾರೆ. ಗ್ರಾಮೀಣ ಅಭಿವೃದ್ಧಿ ಆಗದಿದ್ರೆ ದೇಶ ಅಭಿವೃದ್ಧಿ ಆಗಲ್ಲ ಅಂತಾ ಗಾಂಧಿ ಅವರು ಹೇಳಿದ್ರು, ಒಂದು ವರ್ಷದಲ್ಲಿ 100 ದಿನಗಳು ಗ್ಯಾರಂಟಿ ಉದ್ಯೋಗದ ಖಾತ್ರಿ ಆಗುತಿತ್ತು. ಯಾರೇ ಉದ್ಯೋಗ ಬೇಕು ಅಂದ್ರು ಪಂಚಾಯ್ತಿಗಳಿಗೆ ತೆರಳಿ ಕೆಲಸ ಪಡೆದುಕೊಳ್ಳುತ್ತಿದ್ದರು. ಈಗ ಉದ್ಯೋಗ ಕೊಡೋ ಸಂಪೂರ್ಣ ಅಧಿಕಾರ ಕೇಂದ್ರಕ್ಕೆ ಹೋಗಿದೆ. ಹೀಗಾಗಿ ನಾವು ಮನರೇಗಾ ಯೋಜನೆಯನ್ನೇ ಮುಂದುವರೆಸಬೇಕು ಎಂದು ಆಹ್ರಹಿಸಿದ್ದಾರೆ.
ಮನರೇಗಾ ಯೋಜನೆಯಲ್ಲಿ ಯಾವುದೇ ಲೋಪದೋಷ ಇರಲಿಲ್ಲ. ಜಿ ರಾಮ್ ಜಿ ಕಾಯ್ದೆಯಲ್ಲಿ ಹಲವು ಲೋಪದೋಷಗಳು ಕಂಡು ಬರಲಿವೆ. ಮನರೇಗಾದಲ್ಲಿ 100 ದಿನಗಳು ಕೆಲಸ ಮಾಡಿದ್ರೆ 90 ಕೇಂದ್ರ, 10 ರಾಜ್ಯ ಸರ್ಕಾರ ಕೊಡಬೇಕಿತ್ತು. ಈಗ 40 ಪರ್ಸೆಂಟ್ ರಾಜ್ಯ ಸರ್ಕಾರಗಳ ಮೇಲೆ ಭಾರ ಹಾಕಿವೆ ಮನರೇಗಾ ಕಾಯ್ದೆಯನ್ನ ಉಳಿಸಿಕೊಳ್ಳೋ ಕೆಲಸವನ್ನ ನಾವು ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಪ್ರಮುಖ ಬೇಡಿಕೆಗಳು
- ಜಿ ರಾಮ್ ಜಿ ಕಾಯ್ದೆ ರದ್ದು ಮಾಡಬೇಕು
- ಮನರೇಗಾ ಕಾಯ್ದೆ ಮರು ಸ್ಥಾಪನೆ ಮಾಡಬೇಕು
- ಗ್ರಾಮ ಪಂಚಾಯತಿಗೆ ಸ್ವಾತಂತ್ರ್ಯ ನೀಡಬೇಕು
- ಕಾರ್ಮಿಕರಿಗೆ ಕನಿಷ್ಠ 400 ವೇತನ ನೀಡಬೇಕು
ಇದನ್ನೂ ಓದಿ : ಭಾರತದ ಸೋಲಿಗೆ ಪಾಕ್ ಕ್ರಿಕೆಟಿಗರ ಸಂಭ್ರಮ | ಮೊಹಮ್ಮದ್ ಅಮಿರ್ ವ್ಯಂಗ್ಯ!


















