ಬೆಂಗಳೂರು : ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ಹಾಗೂ ಇತರರಿಂದ ನಡೆದಿದ್ದ ಎಟಿಎಂ ರಾಬರಿ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೆ ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದೆ. ದರೋಡೆಗೆ ವಿಫಲ ಯತ್ನ ನಡೆಸಿದ್ದ ನೇಪಾಳ ಮೂಲದ ರಾಜೇಂದ್ರ ಸಿಂಗ್ (23) ಎಂಬುವವನ ಬಂಧನವಾಗಿದೆ.
ಫೆ.10 ರಂದು ಇಂದಿರಾನಗರದ ಡಬಲ್ ರೋಡ್ ಬಳಿ ಇರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂನಲ್ಲಿ ಮಧ್ಯರಾತ್ರಿ ಎಟಿಎಂ ಶಟ್ಟರ್ ಬಂದ್ ಮಾಡಿ ದರೋಡೆಗೆ ಯತ್ನ ನಡೆಸಿದ್ದ. ಕಟ್ಟಿಂಗ್ ಮಷೀನ್ ಬಳಸಿ ದರೋಡೆಗೆ ಯತ್ನ ನಡೆಸಿದ್ದ. ATM ಒಳಗಿದ್ದ ಸಿಸಿಟಿವಿಯನ್ನ ಬಟ್ಟೆ ಮತ್ತು ಟೇಪ್ ಕವರ್ ಬಳಸಿ ಮುಚ್ಚಿದ್ದ.
ಆರೋಪಿಯ ಬಂಧನದ ಬಳಿಕ ನಾಗಾರ್ಜುನ ಹೋಟೆಲ್ ಕಿಚನ್ ನಲ್ಲಿ ಕೆಲಸ ಮಾಡುತಿದ್ದುದಾಗಿ ಹೇಳಿದ್ದಾನೆ. ಎಟಿಎಂ ಒಡೆಯಲು ಸಾಧ್ಯವಾಗದೇ ಯಾವುದೇ ಹಣ ಸಿಗದೇ ಪಾಪಸ್ ಆಗಿದ್ದ. ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳ್ಳನನ್ನ ಸೆರೆಹಿಡಿದ ಇಂದಿರಾನಗರ ಪೊಲೀಸರು ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ಪುಕ್ಸಟ್ಟೆ ಸಿಗರೇಟ್ ಕೊಟ್ಟಿಲ್ಲವೆಂದು ಕಾಂಡಿಮೆಂಟ್ಸ್ ಮಾಲೀಕರ ಮೇಲೆ ಹಲ್ಲೆಗೆ ಯತ್ನ



















