ಬೆಂಗಳೂರು : ಬುಧವಾರ ಸಂಜೆ, ಬ್ಯಾಟರಾಯನಪುರ ಪೋಲಿಸ್ ಠಾಣೆ ವ್ಯಾಪ್ತಿಯೊಂದರಲ್ಲಿ ಕಿಡಿಗೇಡಿಗಳು ಕಾಂಡಿಮೆಂಟ್ಸ್ ಅಂಗಡಿಯ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಮಂಜೇಶ್ ಎಂಬ ವ್ಯಕ್ತಿ ಮತ್ತು ಅವನ ಸ್ನೇಹಿತ ಬೆಣ್ಣೆ, ಎಂಬುದಾಗಿ ಗುರುತಿಸಲ್ಪಟ್ಟವರು ಅಂಗಡಿಯ ಮಾಲೀಕ ರಾಜು ಅವರ ಬಳಿ ಸಿಗರೇಟ್ ಕೇಳಿದಾಗ, ಸಿಗರೇಟ್ ಹಣವನ್ನು ನೀಡಲು ನಿರಾಕರಿಸಿದ ಅವರು ಅವಾಚ್ಯ ಶಬ್ಧದಿಂದ ಬೈದು , ಅಂಗಡಿ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದರು.
ಮಾಲೀಕನೊಂದಿಗೆ ಅಷ್ಟೇ ಅಲ್ಲದೇ ಗ್ರಾಹಕರೊಂದಿಗೂ ಜಗಳವಾಡಿದ್ದಾರೆ ಎನ್ನಲಾಗಿದೆ. ಬಳಿಕ, ಡ್ರ್ಯಾಗರ್‌ನಂತಹ ಮುಂತಾದ ಸಲಕರಣಗಳನ್ನು ತೆಗೆದುಕೊಂಡು, ಮಾಲೀಕ ರಾಜು ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳು, ಅಂಗಡಿಯಲ್ಲಿದ್ದ ವಸ್ತುಗಳನ್ನು ಹಾಳು ಮಾಡಿದ್ದಾರೆ.
ಈ ಕುರಿತು, ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ತನಿಖೆ ಮುಂದುವರಿಯುತ್ತಿದೆ. ಸದ್ಯ ಆರೋಪಿಗಳನ್ನು ಪೊಲೀಸರಿಗೆ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಪೊಲೀಸ್ ವಾಹನ-ಟ್ರಕ್ ಮಧ್ಯೆ ಭೀಕರ ಅಪಘಾತ | ಐವರು ಸಾವು



















