ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇಂಡಿಯನ್ ಪೋರ್ಟ್ ರೈಲ್ ಆ್ಯಂಡ್ ರೋಪ್ ವೇ ಕಾರ್ಪೊರೇಷನ್ ಲಿಮಿಟೆಡ್ ನಲ್ಲಿ (IPRCL Recruitment 2026) ಖಾಲಿ ಇರುವ 47 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಡೆಪ್ಯೂಟಿ ಮ್ಯಾನೇಜರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಬೇಕು ಎಂದು ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ.
ಹುದ್ದೆಗಳ ಸಂಕ್ಷಿಪ್ತ ವಿವರ
ನೇಮಕಾತಿ ಸಂಸ್ಥೆ ಇಂಡಿಯನ್ ಪೋರ್ಟ್ ರೈಲ್ ಆ್ಯಂಡ್ ರೋಪ್ ವೇ ಕಾರ್ಪೊರೇಷನ್ ಲಿಮಿಟೆಡ್
ಹುದ್ದೆಯ ಹೆಸರು: ಡೆಪ್ಯೂಟಿ ಮ್ಯಾನೇಜರ್ ಇತ್ಯಾದಿ
ಒಟ್ಟು ಹುದ್ದೆಗಳು: 47
ಸಂದರ್ಶನದ ದಿನಾಂಕ: ಮಾರ್ಚ್ 25
ಉದ್ಯೋಗ ಸ್ಥಳ: ದೇಶಾದ್ಯಂತ
ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ಪದವಿ, ಡಿಪ್ಲೋಮಾ ಕೋರ್ಸ್ ಮುಗಿಸಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 2.8 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ. ಸಿವಿಲ್, ಎಲೆಕ್ಟ್ರಿಕಲ್, ಐಟಿ, ಎಚ್ ಆರ್ ಸೇರಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಡೆಪ್ಯೂಟಿ ಮ್ಯಾನೇಜರ್ ಸೇರಿ ಹಲವು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸಲು ಬಯಸುವವರು ಮೊದಲಿಗೆ iprcl.in ವೆಬ್ ಸೈಟ್ ಗೆ ಭೇಟಿ ನೀಡಬೇಕು. ಅರ್ಜಿ ನಮೂನೆಯ ಪ್ರಿಂಟೌಟ್ ತೆಗೆದುಕೊಂಡು, ಅದನ್ನು ಭರ್ತಿ ಮಾಡಬೇಕು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬೇಕು.
ಅರ್ಜಿ ಸಲ್ಲಿಸಬೇಕಾದ ವಿಳಾಸ
ಮುಖ್ಯ ಜನರಲ್ ಮ್ಯಾನೇಜರ್ (ಎಚ್ ಆರ್), ಇಂಡಿಯನ್ ಪೋರ್ಟ್ ರೈಲ್ ಆ್ಯಂಡ್ ರೋಪ್ವೇ ಕಾರ್ಪೊರೇಷನ್ ಲಿಮಿಟೆಡ್, 4ನೇ ಮಹಡಿ, ನಿರ್ಮಾಣ್ ಭವನ, ಮುಂಬೈ ಪೋರ್ಟ್ ಟ್ರಸ್ಟ್ ಕಟ್ಟಡ, ಎಂಪಿ ರಸ್ತೆ, ಮಜಗಾಂವ್ (ಇ), ಮುಂಬೈ-400010.
ಇದನ್ನೂ ಓದಿ: ಬೆಸ್ಕಾಂನ ಕಳಪೆ ಪ್ರದರ್ಶನಕ್ಕೆ ಸಿಕ್ತು ರೆಡ್ ಕಾರ್ಡ್..!


















