ಕೊಪ್ಪಳ: ಹನುಮ ಜನ್ಮಸ್ಥಳ ಅಂಜನಾದ್ರಿಯಲ್ಲಿ ಇಂದು ಬಹುನಿರೀಕ್ಷಿತ ಸಿನಿಮಾ ‘ಜೈ ಹನುಮಾನ್’ ಅಧಿಕೃತ ಚಾಲನೆಗೊಂಡಿದೆ. ಮುಹೂರ್ತಕ್ಕಾಗಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಿಷ್ಕಿಂಧಾ ನಾಡಿಗೆ ಆಗಮಿಸಿದ್ದಾರೆ.
ಮುಹೂರ್ತದ ಸಂಭ್ರಮದಲ್ಲಿ ನಟರು, ತಂತ್ರಜ್ಞರು ಮತ್ತು ಪ್ರಮುಖ ಗಣ್ಯರು ಭಾಗಿಯಾಗಿದ್ದು, ಅಂಜನಾದ್ರಿ ಬೆಟ್ಟದ ಸುತ್ತಮುತ್ತಾ ಬಿಗಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಯಿತು. ಚಿತ್ರವನ್ನು ಪ್ರಶಾಂತ್ ವರ್ಮ ನಿರ್ದೇಶಿಸುತ್ತಿದ್ದು, ಹಿಂದಿನ ‘ಹನುಮಾನ್’ ಚಿತ್ರ ಯಶಸ್ಸಿನ ಬಳಿಕ ಬರುವ ಸೀಕ್ವೆಲ್ ಆಗಿದೆ.
ಹನುಮಂತನ ಪಾತ್ರಕ್ಕೆ ರಿಷಬ್ ಶೆಟ್ಟಿ ಆಯ್ಕೆಯಾಗಿರುವುದು ಚಿತ್ರದ ತೂಕ ಹೆಚ್ಚಿಸಿದೆ. ಮುಹೂರ್ತದ ಸಂದರ್ಭದಲ್ಲಿ ಹನುಮ ಭಕ್ತರು ಮತ್ತು ಚಿತ್ರತಂಡದ ಜೈಕಾರದಿಂದ ಕಾರ್ಯಕ್ರಮ ನೆರವೇರಿತು.
ಇದನ್ನೂ ಓದಿ: ‘ರಜನಿಕಾಂತ್-ಕಮಲ್ ಹಾಸನ್’ ಜುಗಲ್ ಬಂಧಿ!



















