ಬೆಳಗಾವಿ: ತಾಯಿ ಅಗಲಿಕೆಗೆ ಬೇಸತ್ತು ಬಾವಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಗನನ್ನು ರಕ್ಷಣೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಬಾಬು ಪಾಂಡು ಸಾಂಬರೇಕರ (41) ರಕ್ಷಣೆಗೆ ಒಳಗಾದ ವ್ಯಕ್ತಿ.ಬೆಳಗಾವಿಯ ಹೆಲ್ಫ್ ಲೈನ್ ಎಮರ್ಜೆನ್ಸಿ ರೆಸ್ಕ್ಯೂ ಫೌಂಡೇಶನ್ ಕಾರ್ಯಕರ್ತರ ಮಾನವೀಯ ಕಾರ್ಯ ಮರೆದಿದ್ದಾರೆ. ಬಾವಿಯೊಳಗೆ ಜಿಗಿಯುತ್ತಿದ್ದಂತೆ ಬಾಬು ಕೇಬಲ್ ಅಡಿ ಸಿಲುಕಿದ್ದ. ತಕ್ಷಣವೇ ಗಮನಿಸಿದ ಸ್ಥಳೀಯರು ಫೌಂಡೇಶನ್ ಮುಖ್ಯಸ್ಥ ಬಸವರಾಜ್ ಹಿರೇಮಠಗೆ ಕರೆ ಮಾಡಲಾಗಿದ್ದು,ತಕ್ಷಣವೇ ಆಗಮಿಸಿ ಬಾವಿಗೆ ಬಿದ್ದಿದ್ದ ಬಾಬು ಸಾಂಬರೇಕರ ರಕ್ಷಣೆ ಮಾಡಲಾಗಿದೆ.
ರಕ್ಷಣೆ ವೇಳೆ ಬಾಬು ನನ್ನನ್ನು ಸಾಯಲು ಬಿಡಿ ಎಂದು ಗೋಗರೆದಿದ್ದಾರೆ. 15 ದಿನಗಳ ಹಿಂದೆ ಅನಾರೋಗ್ಯದ ಕಾರಣಕ್ಕೆ ಬಾಬು ತಾಯಿ ಮೃತಪಟ್ಟಿದ್ದು, ತಾಯಿ ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದ ಬಾಬು ಸಾಂಬರೇಕರ, ಇದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ: JDS ಮಾಜಿ ಶಾಸಕ ಸುರೇಶ್ ಗೌಡ ಕಾರು ಅಪಘಾತ..!



















